ಲಕ್ನೋ: ಮಹಿಳೆಯರ ಸುರಕ್ಷತೆಗೆಂದು ಉತ್ತರಪ್ರದೇಶ ಸರ್ಕಾರ ರಚಿಸಿರುವ Anti-Romeo Squads ಇದುವರೆಗೆ ಒಟ್ಟು 7.5 ಲಕ್ಷ ಜನರನ್ನು ವಿಚಾರಿಸಿದೆ ಮತ್ತು ಇದರ ಅರ್ಧದಷ್ಟು ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ಮಾ.22ರಿಂದ ಮೇ 28ರವರೆಗೆ Anti-Romeo Squads ಬಸ್ ಸ್ಟ್ಯಾಂಡ್, ಸ್ಕೂಲ್, ಕಾಲೇಜು, ಮಾರ್ಕೆಟ್ ಸೇರಿದಂತೆ ಒಟ್ಟು 2 ಲಕ್ಷ ಜಾಗಗಳಲ್ಲಿ ಪರಿಶೀಲನೆ ನಡೆಸಿದೆ. 538 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 1, 264 ಜನರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.
7.42 ಲಕ್ಷ ಜನರನ್ನು ವಿಚಾರಿಸಲಾಗಿದ್ದು, ಇದರಲ್ಲಿ 3.38 ಲಕ್ಷ ಜನರಿಗೆ ಎಚ್ಚರಿಗೆ ನೀಡಲಾಗಿದೆ ಎಂದಿದ್ದಾರೆ.
ಮಹಿಳೆಯರಿಗೆ ಕಿರುಕುಳ ನೀಡುವವರನ್ನು, ದೌರ್ಜನ್ಯ ಎಸಗುವವರನ್ನು ಹತ್ತಿಕ್ಕುವ ಸಲುವಾಗಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು Anti-Romeo Squadsನ್ನು ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.