ನವದೆಹಲಿ: ಸೈಕಲ್ ಗಸ್ತು ತಿರುಗುವಿಕೆಗೆ ದೆಹಲಿ ಪೊಲೀಸರು ಚಾಲನೆ ನೀಡಿದ್ದಾರೆ. ದೆಹಲಿಯ ಟ್ರಾನ್ಸ್-ಯುಮುನಾ ಪ್ರದೇಶದಂತಹ ಇಕ್ಕಟ್ಟಿನ ಸ್ಥಳಗಳಲ್ಲಿ ಗಸ್ತು ತಿರುಗುವಿಕೆಗೆ ದೊಡ್ಡ ವಾಹನಗಳನ್ನು ಬಳಸುವುದು ಕಷ್ಟಕರವಾದ ಹಿನ್ನಲೆಯಲ್ಲಿ ಸೈಕಲ್ನಲ್ಲಿ ಗಸ್ತು ತಿರುಗುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೈಸಿಕಲ್ ಪ್ಯಾಟ್ರೋಲ್ಸ್ ಒಂದು ಹಸಿರು ಅಭಿಯಾನವೂ ಆಗಿದೆ, ಮಾತ್ರವಲ್ಲ ಅಪರಾಧ ತಡೆಗೆ ಪ್ರಮುಖ ರಸ್ತೆಗಳಲ್ಲಿ ನಡೆಸಲಾಗುವ ಮೋಟಾರ್ ಸೈಕಲ್ ಮತ್ತು ಪಿಸಿಆರ್ ಪ್ಯಾಟ್ರೋಲ್ಸ್ಗಳಿಗೆ ಪರ್ಯಾಯ ಮತ್ತು ಪೂರಕವೂ ಆಗಿದೆ.
ಕೇಂದ್ರದ ವಸತಿ ಖಾತೆ ರಾಜ್ಯ ಸಚಿವರಾಗಿರುವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಸೈಕಲ್ ಗಸ್ತು ತಿರುಗುವಿಕೆಗೆ ಮಂಗಳವಾರ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸಮ್ಮುಖದಲ್ಲಿ ಚಾಲನೆ ನೀಡಿದ್ದಾರೆ.
ದೆಹಲಿಯ ಪೂರ್ವ, ಈಶಾನ್ಯ ಮತ್ತು ಶಹದರ ಜಿಲ್ಲೆಗಳಲ್ಲಿ ಗಸ್ತು ತಿರುಗಲು ಒಟ್ಟು 65 ಸೈಕಲ್ಗಳನ್ನು ದೆಹಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
ಪಾರ್ಕ್ಗಳಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ರಕ್ಷಣೆ ಒದಗಿಸಲು, ಶಾಲಾ-ಕಾಲೇಝುಗಳ ಆವರಣದಲ್ಲಿ ಸೈಕಲ್ ಗಸ್ತು ತಿರುಗುವಿಕೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.