ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದದ ಆರ್ಥಿಕತೆ ಶೇ.7.2ರಷ್ಟು ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷೆ ವ್ಯಕ್ತಪಡಿಸಿದೆ. ನೋಟ್ ಬ್ಯಾನ್ನಿಂದಾಗಿ ಕಳೆದ ಹಣಕಾಸು ಪ್ರಗತಿಯಲ್ಲಿ ತುಸು ಅಡೆತಡೆಯಾದ ಕಾರಣ ಪ್ರಗತಿ ಶೇ.6.8ರಷ್ಟಿತ್ತು ಎಂದಿದೆ.
2016-17ರ ಆರಂಭದಲ್ಲಿ ಭಾರತದ ಆರ್ಥಿಕತೆ ತುಸು ಇಳಿಕೆ ಕಂಡಿತು, ಆದರೆ ಅನುಕೂಲಕಾರಿ ಮಾನ್ಸೂನ್ ಆರಂಭದಿಂದಾಗಿ ಆರ್ಥಿಕತೆ ಮೇಲಕ್ಕೆ ಬಂದಿದೆ. 2017-18ರ ವೇಳೆಗೆ ಶೇ.7.6ಮತ್ತು 2019-20ರ ವೇಳೆಗೆ 7.7ರಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ ಎಂದಿದೆ.
ಭಾರತ ವಿಶ್ವದ ಶೀಘ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯಾಗಿದ್ದು, ಸರಕು ಮತ್ತು ಸೆವಾ ತೆರಿಗೆಯಿಂದ ಅದು ಮತ್ತಷ್ಟು ಉತ್ತೇಜ ಪಡೆದುಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ಭಾರತ ನಿರ್ದೇಶಕ ಜುನೈದ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ ಮತ್ತು ಬಾಹ್ಯ ಸನ್ನಿವೇಶಗಳು ಸ್ಥಿರವಾಗಿರಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.