ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್ನ್ನು ಒಳಗೊಂಡ ಮನ್ ಕೀ ಬಾತ್: ಎ ಸೋಶಲ್ ರಿವಲ್ಯೂಷನ್ ಆನ್ ರೇಡಿಯೋ’ ಮತ್ತು ‘ಮಾರ್ಚಿಂಗ್ ವಿದ್ ಎ ಬಿಲಿಯನ್-ಅನಲೈಸಿಂಗ್ ನರೇಂದ್ರ ಮೋದಿಸ್ ಗವರ್ನ್ಮೆಂಟ್ ಅಟ್ ಮಿಡ್ಟರ್ಮ್’ ಎಂಬ ಪುಸ್ತಕಗಳನ್ನು ಶುಕ್ರವಾರ ಬಿಡುಗಡೆಯಾಗುತ್ತಿದೆ.
ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಈ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಪುಸ್ತಕಗಳ ಮೊದಲ ಪ್ರತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ನೀಡಲಾಗುತ್ತದೆ.
‘ಮನ್ ಕೀ ಬಾತ್: ಎ ಸೋಶಲ್ ರಿವಲ್ಯೂಷನ್ ಆನ್ ರೇಡಿಯೋ ‘ ಅನ್ನು ರಾಜೇಶ್ ಜೈನ್ ಅವರು ಬರೆದಿದ್ದು, ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ಒಟ್ಟು ಸಾರಾಂಶಗಳನ್ನು ಇದು ಒಳಗೊಂಡಿದೆ.
‘ಮಾರ್ಚಿಂಗ್ ವಿದ್ ಎ ಬಿಲಿಯನ್-ಅನಲೈಸಿಂಗ್ ನರೇಂದ್ರ ಮೋದಿಸ್ ಗವರ್ನ್ಮೆಂಟ್ ಅಟ್ ಮಿಡ್ಟರ್ಮ್ ‘ ಪುಸ್ತಕವನ್ನು ಪತ್ರಕರ್ತ ಉದಯ್ ಮಹುರ್ಕರ್ ಅವರು ಬರೆದಿದ್ದು, 3 ವರ್ಷಗಳ ಮೋದಿ ಆಡಳಿತದ ಬಗ್ಗೆ ವಿವರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.