ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹನ್ಸಾರಾಜ್ ಕಾಲೇಜಿನ ಯೋಗ ಶಿಕ್ಷಕರಾದ ವರುಣ್ ಆರ್ಯ ಮೇ 15ರಂದು ತುಸು ವಿಶ್ರಾಂತಿಯನ್ನು ಪಡೆಯದೆಯೇ ನಿರಂತರವಾಗಿ ಒಂದು ಗಂಟೆಗಳ ಕಾಲ 535 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾರೆ.
ಈ ಸಾಧನೆಯನ್ನು ಮಾಡಲು ಇವರು ಕಳೆದ 8 ತಿಂಗಳಿನಿಂದ ನಿರಂತರ ಅಭ್ಯಾಸವನ್ನು ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಪ್ರಾಚೀಣ ಯೋಗ ಕಲೆಯನ್ನು ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದಾರೆ.
ಈ ಸಾಧನೆ ಮಾಡಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದೆ. ಸೂರ್ಯ ನಮಸ್ಕಾರ ನನ್ನ ನೆಚ್ಚಿನ ಆಸನವಾಗಿದೆ. ದಾಖಲೆ ಮಾಡಲು ಭರವಸೆ ನನಗಿತ್ತು ಎಂದು ಆರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.