ನವದೆಹಲಿ : ತ್ಯಾಜ್ಯಗಳನ್ನು ಆಸ್ತಿಯನ್ನಾಗಿ ಪರಿವರ್ತಿಸುವ ಅಗತ್ಯತೆಯನ್ನು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಉದ್ಯಮಿಗಳು ಕೂಡಾ ಸ್ವಚ್ಛ ಭಾರತ ಅಭಿಯಾನದಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಇದೊಂದು ದೊಡ್ಡ ವ್ಯಾವಹಾರಿಕ ಅಂಶವಾಗಿದೆ ಎಂದರು.
ಸಾಮಾಜಿಕ ಉದ್ಯಮಿಗಳ ಪಾತ್ರವನ್ನು ನಿಭಾಯಿಸುತ್ತಿರುವ ಅಪಾರ ಸಂಖ್ಯೆಯ ಯುವಜನತೆ ಸ್ವಚ್ಛ ಭಾರತದಲ್ಲಿ ಭಾಗವಹಿಸುವದಕ್ಕೆ ಮುಂದೆ ಆಗಮಿಸುತ್ತಿದ್ದಾರೆ ಎಂದರು.
ಸ್ವಚ್ಛ ಭಾರತ ಅಭಿಯಾನವು ಅಪಾರ ಸಂಖ್ಯೆಯ ಸಾಮಾಜಿಕ ಉದ್ಯಮಿಗಳ ಸೃಷ್ಟಿಗೆ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಎಂದರು.
ತ್ಯಾಜ್ಯದಿಂದ ಆಸ್ತಿ ಎಂಬ ನಂಬಿಕೆಯು ಇದೀಗ ಬಲಗೊಳ್ಳುತ್ತಿದೆ. ಇದಕ್ಕಾಗಿ ಅಪಾರ ಸಂಖ್ಯೆಯ ಸಾಮಾಜಿಕ ಉದ್ಯಮಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಇಸ್ಸೆಲ್ ಗ್ರೂಪ್ನ 90 ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ನಾವು ತ್ಯಾಜ್ಯವನ್ನು ತ್ಯಾಜ್ಯವೆಂದೇ ಪರಿಗಣಿಸಿದರೆ, ನಾವು ಒಂದು ಅತ್ಯಮೂಲ್ಯ ಸ್ವತ್ತನ್ನು ಕಳೆದುಕೊಂಡಂತೆ ಎಂದಿರುವ ಅವರು, ಇದೀಗ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿದೆ. ಅದನ್ನು ವೈಜ್ಞಾನಿಕ ಮಾದರಿಯಲ್ಲಿ ಸಮರ್ಥ ನಿರ್ವಹಣೆ ಮತ್ತು ಕಾನೂನಾತ್ಮಕ ಬಳಕೆಯಿಂದ ನೀಗಿಸಿಕೊಳ್ಳಬಹುದು ಎಂದರು.
ಉದ್ಯಮಶೀಲತೆಯು ಭಾರತೀಯ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದ್ದು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಿದುಬಂದಿದೆ ಎಂದರು.
ಕೌಟುಂಬಿಕ ಮೌಲ್ಯವನ್ನು ಒತ್ತಿ ಹೇಳಿದ ಅವರು, ವಿಶ್ವಕ್ಕೆ ಇದೊಂದು ಮಹತ್ವದ ಉಡುಗೊರೆ ಎಂದರು.
ಅಭಿವೃದ್ಧಿ ಹೊಂದಿದ ದೇಶಗಳು ಕೂಡಾ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕುಟುಂಬ ಮೌಲ್ಯಗಳ ಪುನರುಜ್ಜೀವನದ ಬಗ್ಗೆ ಭರವಸೆಗಳನ್ನು ನೀಡುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.