ಶ್ರೀನಗರ : ಕಾಶ್ಮೀರದ ಯುವಕ, ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ್ ಅವರು ಹತ್ಯೆಗೀಡಾದ ಬಳಿಕ ಕಾಶ್ಮೀರದ ಯುವಕರಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಂಗಿತ ಹೆಚ್ಚಾಗಿವೆ.
ಅಲ್ಲಿನ ಪೊಲೀಸ್ ಇಲಾಖೆಯ 700 ಖಾಲಿ ಹುದ್ದೆಗಳಿಗೆ ಬರೋಬ್ಬರಿ 67,000 ಯುವಕರು ಅರ್ಜಿ ಹಾಕಿದ್ದಾರೆ.
ಶನಿವಾರವೊಂದರಲ್ಲೇ ಕಣಿವೆ ರಾಜ್ಯದ ಭಕ್ಷಿ ಸ್ಟೇಡಿಯಂನಲ್ಲಿ 2,000 ಕ್ಕೂ ಅಧಿಕ ಯುವಕ ಮತ್ತು ಯುವತಿಯರು ದೈಹಿಕ ಪರೀಕ್ಷೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.
ಅಲ್ಲಿನ ಹಲವಾರು ಉಗ್ರ ಸಂಘಟನೆಗಳು ಯುವಕರನ್ನು ರಕ್ಷಣಾ ಪಡೆಗಳಿಗೆ ಸೇರದಂತೆ ಬೆದರಿಕೆಯೊಡ್ಡಿ ವೀಡಿಯೋಗಳನ್ನು ಪ್ರಸಾರ ಮಾಡಿದೆ. ಆದರೆ ಕಾಶ್ಮೀರದ ಯುವಕ-ಯುವತಿಯರು ಅವರ ಬೆದರಿಕೆಗೆ ಹೆದರದೆ ತಮ್ಮ ನಾಡಿನ ಸೇವೆಗಾಗಿ ರಕ್ಷಣಾ ಪಡೆಗಳಿಗೆ ಸೇರಲು ಮುಂದಾಗುತ್ತಿದ್ದಾರೆ.
ಕಾಶ್ಮೀರದ 35,722 ಮಂದಿ, ಜಮ್ಮುವಿನ 31,496 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಾಗಿ 6000 ಕಾಶ್ಮೀರಿ ಯುವತಿಯರು ದೈಹಿಕ ಪರೀಕ್ಷೆಯನ್ನು ಎದುರಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ಎಸ್.ಪಿ. ವೈದ್ ಹೇಳಿದ್ದಾರೆ.
ಹಲವಾರು ಮಂದಿ ಕಾಶ್ಮೀರಿ ಯುವತಿಯರು ಸಾಂಪ್ರದಾಯವಾದಿ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.