ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಯಾದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರ ಹೆಸರನ್ನು ಶಾಲೆಗೆ ಮರುನಾಮಕರಣ ಮಾಡುವುದಾಗಿ ಸೇನೆ ತಿಳಿಸಿದೆ.
ಉಮರ್ ಫಯಾಝ್ ಅವರ ಕುಟುಂಬಕ್ಕೆ ಆರ್ಮಿ ಗ್ರೂಪ್ ಇನ್ಶುರೆನ್ಸ್ ಫಂಡ್ನ 75 ಲಕ್ಷ ರೂ.ಗಳ ಚೆಕ್ನ್ನು ಮತ್ತು ಹುತಾತ್ಮ ರೆಜಿಮೆಂಟ್ನ ರಜಪೂತಾನ ರೈಫಲ್ಸ್ ವತಿಯಿಂದ 1 ಲಕ್ಷ ರೂ.ಗಳನ್ನು ಹಸ್ತಾಂತರ ಮಾಡಲಾಯಿತು.
ಸೇನಾಧಿಕಾರಿಯ ಕುಟುಂಬದೊಂದಿಗೆ ನಿಂತು ಅವರಿಗೆ ಬೇಕಾದ ಎಲ್ಲಾ ಸೌಲಭ್ಯ ಮತ್ತು ಸುರಕ್ಷತೆಯನ್ನು ಒದಗಿಸುವುದಾಗಿ ಮೇಜರ್ ಜನರಲ್ ಬಿ. ಎಸ್. ರಾಜು ಭರವಸೆ ನೀಡಿದ್ದಾರೆ.
ಮೇ 10 ರಂದು ಉಮರ್ ಫಯಾಝ್ ಅವರು ಸೋಫಿಯಾನ ಜಿಲ್ಲೆಯಲ್ಲಿ ಸಂಬಂಧಿಗಳ ಮದುವೆಯ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಯಾಗಿದ್ದರು.
ಈ ಕೃತ್ಯಕ್ಕೆ ಕಾರಣರಾದ ಸ್ಥಳೀಯ ಶಂಕಿತ ಮೂರು ಉಗ್ರರ ಪೋಸ್ಟರ್ಗಳನ್ನು ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.