ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ.
ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ ವಿಶ್ವದಾಖಲೆ ಮುರಿಯಲು ಮುಂದಾಗಿದ್ದಾನೆ.
ನಾಸಾ ಮತ್ತು ಐ ಡೂಡಲ್ ಲರ್ನಿಂಗ್ ಸಂಸ್ಥೆಗಳ ‘ಕ್ಯೂಬ್ಸ್ ಇನ್ ಸ್ಪೇಸ್’ ಸ್ಫರ್ಧೆಯ ಮೂಲಕ ರಿಫಾತ್ ಶಾರೂಕ್ ಅವರ 64 ಗ್ರಾಂ ಉಪಗ್ರಹ ಉಡಾವಣೆಗೆ ಆಯ್ಕೆಯಾಗಿದೆ. ಅತಿ ಹಗುರವಾದ ಮತ್ತು ಚಿಕ್ಕ ಗಾತ್ರವನ್ನು ಹೊಂದಿರುವ ಈ ಉಪಗ್ರಹಕ್ಕೆ ‘ಕಲಾಂಸ್ಯಾಟ್’ ಎಂದು ಹೆಸರಿಲಾಗಿದೆ. ಈ ಉಪಗ್ರಹದ ಅವಧಿಯು 240 ನಿಮಿಷಗಳಾಗಿದ್ದು, ಇದು ಉಪಕಕ್ಷೆಯಲ್ಲಿ 12 ನಿಮಿಷಗಳವರೆಗೆ ಕಾರ್ಯ ನಿರ್ವಹಿಸಲಿದೆ. ಕಾರ್ಬನ್ ಫೈಬರ್ 3ಡಿ ಪ್ರಿಂಟ್ ಮೂಲಕ ಇದನ್ನು ರೂಪಿಸಲಾಗಿದ್ದು, ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಉದ್ದೇಶ.
ಜೂನ್ 21 ರಂದು ಈ ಉಪಗ್ರಹವು ವಲಾಪ್ಸ್ ಐಲ್ಯಾಂಡ್ನಲ್ಲಿರುವ ನಾಸಾದ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.