ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ಗೆ ಬಳಸುವ ದರದಲ್ಲಿ 60 ಬಿಲಿಯನ್ ಡಾಲರ್ನ್ನು ಉಳಿತಾಯ ಮಾಡಬಹುದು, ಮಾತ್ರವಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು 2030ರೊಳಗೆ 1 ಗಿಗಾಟನ್ಗಳಷ್ಟು ಕಡಿಮೆಗೊಳಿಸಬಹುದು ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ಪ್ರಯಾಣಕ್ಕೆ ಸಂಬಂಧಿಸಿದ ಇಂಧನಗಳ ಬೇಡಿಕೆಯಲ್ಲಿ ಭಾರತ ಶೇ.64ರಷ್ಟನ್ನು ಉಳಿತಾಯ ಮಾಡಬಹುದು ಮತ್ತು 2030ರೊಳಗೆ ಇಂಗಾಲದ ಹೊರಸೂಸುವಿಕೆಯನ್ನು ಶೇ.37ರಷ್ಟು ತಗ್ಗಿಸಬಹುದು. ಮಾತ್ರವಲ್ಲ ಇದರಿಂದ ವರ್ಷಕ್ಕೆ 156 ಮಿಲಿಯನ್ ಟನ್ನಷ್ಟು ಪೆಟ್ರೋಲ್ ಮತ್ತು ಡಿಸೇಲ್ ತಗ್ಗಲಿದೆ ಎಂದಿದೆ.
ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಅವರು ವರದಿಯನ್ನು ಬಿಡುಗಡೆ ಮಾಡುತ್ತಾ ಮಾತನಾಡಿ, ’ಯಾರು ಇಷ್ಟಪಡಲಿ, ಇಷ್ಟಪಡದೇ ಇರಲಿ ಎಲೆಕ್ಟ್ರಿಕ್ ವಾಹನ ಭಾರತಕ್ಕೆ ಬಮದೇ ಬರುತ್ತದೆ, ಇದು ಅನಿವಾರ್ಯ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.