ಮುಂಬಯಿ: ಸರ್ಕಾರಿ ಜಾಹೀರಾತಿನಲ್ಲಿ ರಾಜಕಾರಣಿಗಳ ಭಾವಚಿತ್ರ ಬಳಸುವಂತಿಲ್ಲ ಎನ್ನುವ ಸುಪ್ರೀಂಕೋರ್ಟ್ ತೀರ್ಪಿಗೆ ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ. ಈ ತೀರ್ಪು ನ್ಯಾಯ ಸಮ್ಮತವಾದುದಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂನ ಈ ತೀರ್ಪುನಿಂದ ಪ್ರಜಾಪ್ರಭುತ್ವದ ಅನ್ವಯ ಆಯ್ಕೆಯಾಗಿರುವ ಸರ್ಕಾರ, ಶಾಸಕಾಂಗ ಮತ್ತು ಸಂಸತ್ತನ್ನು ಅವಮಾನಿಸದಂತೆ ಆಗುವುದಿಲ್ಲವೇ ಎಂದು ಅದು ಪ್ರಶ್ನಿಸಿದೆ.
ಸುಪ್ರೀಂ ಏನು ತೀರ್ಪು ನೀಡಿದರೂ ‘ಎಸ್, ಮಹಾರಾಜ್! ನಾವು ಒಪ್ಪಿಕೊಳ್ಳುತ್ತೇವೆ’ ಎಂದು ನಾವು ಹೇಳುತ್ತೇವೆ. ಅಲ್ಲದೇ ತೀರ್ಪಿಗೆ ತಲೆಬಾಗುತ್ತೇವೆ, ನ್ಯಾಯಾಂಗ ನಿಂದನೆಗೆ ಒಳಗಾಗಲು ಯಾರೂ ಇಷ್ಟಪಡುವುದಿಲ್ಲ.
‘ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು ತೀರ್ಪು ನೀಡುತ್ತವೆಯೋ ಅಥವಾ ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಪಕ್ಕಕ್ಕೆ ಸರಿಸಿ ತಾವೇ ಆಡಳಿತ ನಡೆಸುತ್ತವೆಯೋ? ಆದರೂ ನಮಗೆಬೇರೆ ಅವಕಾಶಗಳಿಲ್ಲ, ತಲೆಬಾಗಿ ಸುಪ್ರೀಂ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ’ ಎಂದಿದೆ.
ಇತ್ತೀಚಿಗೆ ನ್ಯಾಯಾಲಯ ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಭಾವಚಿತ್ರ ಹೊರತುಪಡಿಸಿ ಬೇರೆ ಯಾವ ರಾಜಕಾರಣಿಗಳ ಭಾವಚಿತ್ರವನ್ನೂ ಹಾಕುವಂತಿಲ್ಲ ಎಂದು ಆದೇಶ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.