ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ವೋಟಿಂಗ್ ಮಿಶಿನ್ನನ್ನು ಹೇಗೆ ಹ್ಯಾಕ್ ಮಾಡಬಹುದು ಎಂದು ತೋರಿಸಿದ ಎಎಪಿ ವಿರುದ್ಧ ಚುನಾವಣಾ ಆಯೋಗ ಕಿಡಿಕಾರಿದೆ.
ಅಲ್ಲದೇ ಇದನ್ನು ಈ ತಿಂಗಳ ಮೂರನೇ ವಾರದಲ್ಲಿ ನಡೆಸಲಾಗುವ ಹ್ಯಾಕಥಾನ್ನಲ್ಲಿ ತೋರಿಸಿಕೊಡಿ ಎಂದು ಸವಾಲು ಹಾಕಿದೆ.
ವೋಟಿಂಗ್ ಮೆಶಿನ್ನಂತಹ ನಕಲು ಡಿವೈಸ್ನಲ್ಲಿ ಅವರು ಹ್ಯಾಕ್ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಆದರೆ ಹ್ಯಾಕಥಾನ್ ವೇಳೆ ಒರಿಜಿನಲ್ ವೋಟಿಂಗ್ ಮೆಶಿನ್ನಲ್ಲಿ ಅವರು ತಮ್ಮ ಆರೋಪವನ್ನು ಸಾಬೀತುಪಡಿಸಲಿ ಎಂದು ಆಯೋಗ ಹೇಳಿದೆ.
ಕೇವಲ 90 ಸೆಕೆಂಡ್ಗಳಲ್ಲಿ ಅವರು ಹ್ಯಾಕ್ ಮಾಡಿದ್ದಾರೆ, ಆದರೆ ಒರಿಜಿನಲ್ ವೋಟಿಂಗ್ ಮೆಶಿನ್ನ ಒಂದು ಸ್ಕ್ರೂ ಅನ್ನೂ 90 ಸೆಕೆಂಡ್ನಲ್ಲಿ ತೆಗೆಯಲು ಸಾಧ್ಯವಿಲ್ಲ ಎಂದಿದೆ.
ಅಲ್ಲದೇ ಎಎಪಿಯ ಹ್ಯಾಕಿಂಗ್ ಹೇಳಿಕೆ ಬೋಗಸ್ ಎಂದಿದೆ.
ಮೇ 12ರಂದು ಚುನಾವಣಾ ಆಯೋಗ ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಈ ವೇಳೆ ಅದು ತನ್ನ ಹ್ಯಾಕಿಂಗ್ ಸವಾಲಿನ ಬಗ್ಗೆ ವಿವರಿಸಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.