ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಮುಖ ಮೂಲಸೌಕರ್ಯ ವಲಯಗಳನ್ನು ಪರಿಶೀಲನೆ ನಡೆಸಿದರು. ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿದ್ಯುತ್, ನವೀಕರಿಸಬಹುದಾದ ಇಂಧನ, ವಸತಿಗಳು ಇದರಲ್ಲಿ ಸೇರಿವೆ.
ಪಿಎಂಓ, ನೀತಿ ಆಯೋಗ ಮತ್ತು ಎಲ್ಲಾ ಮೂಲಸೌಕರ್ಯ ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ಹಲವಾರು ಸೆಕ್ಟರ್ನಲ್ಲಿ ಮಹತ್ವದ ಪ್ರಗತಿಗಳಾಗಿವೆ ಎಂಬುದು ಈ ವೇಳೆ ತಿಳಿದು ಬಂದಿದೆ.
ನವೀಕರಿಸಬಹುದಾದ ಇಂಧನಗಳ ಉತ್ಪಾದನೆ, ಕೈಗೆಟುಕುವ ದರದ ಮತ್ತು ಗ್ರಾಮೀಣ ವಸತಿ, ಎಲ್ಇಡಿ ಬಲ್ಬ್ಗಳಲ್ಲಿ ಮಹತ್ವದ ಪ್ರಗತಿಗಳಾಗಿವೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ 1.98 ಕೋಟಿ ಜನರಿಗೆ ಅನುಕೂಲವಾಗಿದೆ. 13,000 ಗ್ರಾಮಗಳು ವಿದ್ಯುದೀಕರಣಗೊಂಡಿದೆ. ನವೀಕರಿಸಬಹುದಾದ ಇಂಧನಗಳ ಉತ್ಪಾದನೆ 57 ಗಿಗಾವ್ಯಾಟ್ಗಳಿಗೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.