ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಳುಹಿಸುವ ದ್ವೇಷಪೂರ್ಣ ವಿಷಯಗಳನ್ನು ಫಾರ್ವರ್ಡ್ ಮಾಡದೇ ಇರುವ ಮೂಲಕ ಪ್ರತಿಯೊಬ್ಬ ನಾಗರಿಕನೂ ಯೋಧನಾಗಬೇಕು ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ‘ವುಮೆನ್ ಎಕನಾಮಿಕ್ ಫೊರಂ’ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಯೋಧನಾಗಲು ಸಮವಸ್ತ್ರವನ್ನು ತೊಡಬೇಕಾಗಿಲ್ಲ, ಗಡಿಗಳಿಗೆ ಹೋಗಬೇಕಾಗಿಲ್ಲ, ಏಕೆಂದರೆ ಶತ್ರು ನಮ್ಮ ಮನೆಯಿಂದಲೇ(ಸಾಮಾಜಿಕ ಜಾಲ ತಾಣ) ದಾಳಿ ನಡೆಸಬಹುದು. ಅದಕ್ಕೆ ನಾವು ಮಾಡಬೇಕಾಗಿರುವುದು ಇಷ್ಟೇ, ದುರುದ್ದೇಶದಿಂದ ಕೂಡಿದ, ನಮಗೆ ಜ್ಞಾನವಿಲ್ಲದ ವಿಷಯಗಳನ್ನು ಫಾರ್ವರ್ಡ್ ಮಾಡದೇ ಇರುವುದು. ಈ ಮೂಲಕ ತಪ್ಪು ಮಾಹಿತಿ ಪಸರಿಸುವುದನ್ನು ತಪ್ಪಿಸಿ ಯೋಧರಾಗುವುದು’ ಎಂದಿದ್ದಾರೆ.
ಅಪಾಯಕಾರಿ ವಿಷಯಗಳು ಪ್ರಸರಗೊಳ್ಳುವುದನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ವಿಶ್ವದಾದ್ಯಂತ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿವೆ. ನಾವು ಸ್ವನಿಯಂತ್ರಣ ಹೇರಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.