ಲಕ್ನೋ: ತನ್ನ ಸರ್ಕಾರ ಎಂದಿಗೂ ಜಾತಿ, ಧರ್ಮದ ವಿಷಯದಲ್ಲಿ ತಾರತಮ್ಯ ಮಾಡೋದಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನಮ್ಮ ಸರ್ಕಾರ ತಿಲಕ ಮತ್ತು ಟೊಪ್ಪಿಯ ನಡುವೆ ಎಂದಿಗೂ ತಾರತಮ್ಯ ಮಾಡೋದಿಲ್ಲ. ಎಲ್ಲರಿಗೂ ಭದ್ರತೆಯನ್ನು ಒದಗಿಸುತ್ತೇವೆ. ಯುಪಿಯ ಸಮಸ್ತರನ್ನೂ ಪ್ರಗತಿಯಲ್ಲಿ ಭಾಗವಹಿಸುವಂತೆ ಮಾಡುತ್ತೇವೆ. ಯಾರನ್ನೂ ಓಲೈಕೆ ಮಾಡುವುದಿಲ್ಲ’ ಎಂದಿದ್ದಾರೆ.
‘ಕಾನೂನು ಸುವ್ಯವಸ್ಥೆಗೆ ನಮ್ಮ ಆದ್ಯತೆ. ಕೆಲವೊಂದು ಕಡೆ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ. ನಾನು ಸರ್ಕಾರದ 100 ದಿನಗಳ ರಿಪೋರ್ಟ್ ನೀಡಿದ ಬಳಿಕ ಇಂತಹ ಘಟನೆ ಖಂಡಿತವಾಗಿಯೂ ನಿಲ್ಲುತ್ತದೆ ಎಂಬ ಭರವಸೆ ಇದೆ’ ಎಂದಿದ್ದಾರೆ.
‘ಯುಪಿಯ ಪ್ರತಿ ಸಹೋದರಿ, ತಾಯಿ ಮತ್ತು ವ್ಯಾಪಾರಿ ಸುರಕ್ಷತಾ ಭಾವನೆಯಿಂದ ಬದುಕುವಂತಾಗಬೇಕು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.