ನವದೆಹಲಿ : ಭಾರತ ಮತ್ತು ಪಾಕ್ ಸಂಬಂಧದಲ್ಲಿ ತೀವ್ರ ಬಿಕ್ಕಟ್ಟು ಉದ್ಭವಿಸಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ನೆಟ್ವರ್ಕ್ನ್ನು ಬುಡಸಮೇತ ಕಿತ್ತು ಹಾಕಲು ಜನತೆ ಒಗ್ಗೂಡಬೇಕು ಎಂದು ಕರೆ ನೀಡಿದರು.
ಭಾರತದ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರೊಂದಿಗೆ ಸೋಮವಾರ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಮಾತನ್ನಾಡಿದರು.
ಯಾವ ಪ್ರದೇಶವೂ ಭಯೋತ್ಪಾದನೆಯನ್ನು ನ್ಯಾಯಸಮ್ಮತಗೊಳಿಸುವುದಿಲ್ಲ ಎಂದ ಅವರು, ಉಗ್ರವಾದ ಎಲ್ಲರಿಗೂ ಚಿಂತೆಯ ವಿಷಯವಾಗಿದೆ. ಯಾವುದೇ ಪ್ರಭಾವ, ಗುರಿ ಅಥವಾ ಪ್ರದೇಶ ಉಗ್ರವಾದವನ್ನು ಮೌಲ್ಯೀಕರಿಸುವುದಿಲ್ಲ. ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿದರು.
ಭಯೋತ್ಪಾದನೆಗೆ ನೆಲೆ ಕಲ್ಪಿಸುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಅಲ್ಲದೆ ಟರ್ಕಿಯನ್ನು ದೇಶದ ರಸ್ತೆ, ವಸತಿ, ಬಂದರು ಮುಂತಾದ ಕಡೆ ಬಂಡವಾಳ ಹೂಡುವಂತೆ ಆಹ್ವಾನಿಸಿದರು.
ಉಭಯ ದೇಶಗಳ ನಡುವಣ ಆರ್ಥಿಕ ಬದ್ಧತೆಯನ್ನು ಹೆಚ್ಚಿಸುವ ಅಗತ್ಯತೆಯನ್ನು ಅವರು ಸಾರಿದರು.
ಅಲ್ಲದೆ 2016 ರಿಂದ ಟರ್ಕಿಯೊಂದಿಗಿನ ದ್ವಿಪಕ್ಷೀಯ ವ್ಯವಹಾರ ಯುಎಸ್ಡಿ 6.4 ಬಿಲಿಯನ್ವರೆಗೆ ತಲುಪಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.