ನವದೆಹಲಿ: ನಕ್ಸಲ್ ದಾಳಿಯಲ್ಲಿ, ಉಗ್ರರ ದಾಳಿಯಲ್ಲಿ, ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದಂತಹ ಯೋಧರ ಕುಟುಂಬಗಳನ್ನು ದತ್ತು ತೆಗೆದುಕೊಳ್ಳಲು ಐಎಎಸ್ ಅಧಿಕಾರಿಗಳು ಮುಂದಾಗಿದ್ದಾರೆ.
ಇಂಡಿಯನ್ ಸಿವಿಲ್ ಆಂಡ್ ಅಡ್ಮಿನಿಸ್ಟ್ರೇಶನ್ ಸರ್ವಿಸ್ ಅಸೋಸಿಯೇಶನ್ 2012-15ರ ಬ್ಯಾಚ್ನ ಸುಮಾರು 700 ಯುವ ಅಧಿಕಾರಿಗಳಿಗೆ ತಾವು ನೇಮಕಗೊಂಡ ಪ್ರದೇಶದಲ್ಲಿನ ಹುತಾತ್ಮ ಯೋಧರ ಕನಿಷ್ಠ ಒಂದು ಕುಟುಂಬವನ್ನಾದರು ದತ್ತು ಪಡೆಯುವಂತೆ ಸೂಚಿಸಲಿದೆ.
ಹುತಾತ್ಮರ ಕುಟುಂಬಗಳನ್ನು ಈ ಅಧಿಕಾರಿಗಳು ಸಂಪರ್ಕಿಸಿ ಅವರಿಗೆ ಬರಬೇಕಾದ ಪಿಂಚಣಿ ಹಣ ಸಮಯಕ್ಕೆ ಸರಿಯಾಗಿ ಬರುವಂತೆ, ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗಗಳು ದೊರೆಯುವಂತೆ, ಸರ್ಕಾರದ ಯೋಜನೆಗಳ ಸೌಲಭ್ಯಗಳು ಅವರಿಗೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಲಿದೆ.
ತಾವು ದತ್ತು ಪಡೆದ ಹುತಾತ್ಮ ಕುಟುಂಬಗಳಿಗೆ ಐಎಎಸ್ ಅಧಿಕಾರಿಗಳು ನೇರ ಆರ್ಥಿಕ ಸಹಾಯವನ್ನು ಮಾಡುವುದಿಲ್ಲ. ಬದಲಾಗಿ ಕುಟುಂಬಗಳು ತಮ್ಮ ಹಕ್ಕನ್ನು ಪಡೆದು ಘನತೆಯುತ ಜೀವನ ನಡೆಸುವಂತೆ ನೋಡಿಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.