ನವದೆಹಲಿ: ಭಾರತದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚಾಗುತ್ತಿದೆ ಎಂಬುದನ್ನು ಉಲ್ಲೇಖಿಸಿರುವ ವಿಶ್ವಸಂಸ್ಥೆಯ ವರದಿ, ಇಲ್ಲಿನ ಶೇ.1ರಷ್ಟು ಜನರ ಬಳಿಕ ದೇಶದ ಶೇ.53ರಷ್ಟು ಆಸ್ತಿಯಿದೆ ಎಂದು ಹೇಳಿದೆ.
ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ ಕಾರ್ಯಕ್ರಮದಲ್ಲಿ ‘ದಿ ಬೆಟರ್ ಬ್ಯುಸಿನೆಸ್, ಬೆಟರ್ ವರ್ಲ್ಡ್’ ಎಂಬ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ, ಇದರಲ್ಲಿ ಭಾರತದ ಸಂಪತ್ತಿನ ಅಸಮಾನತೆಯ ಬಗ್ಗೆ ಉಲ್ಲೇಖಿಸಲಾಗಿದೆ.
ಎಲ್ಲಾ ರಾಜ್ಯಗಳಿಗೆಯೂ ಭಾರತದ ಅಭಿವೃದ್ಧಿ ಚಲಿಸುತ್ತಿಲ್ಲ ಎಂದಿರುವ ವರದಿ, ರಷ್ಯಾದ ಬಳಿಕ ಭಾರತದಲ್ಲೇ ಹೆಚ್ಚು ಸಂಪತ್ತಿನ ಅಸಮಾನತೆ ಇದೆ ಎಂದಿದೆ.
ವಿಶ್ವದಲ್ಲೇ ಎರಡನೇ ಅತೀದೊಡ್ಡ ಆಹಾರ ಉತ್ಪಾದಕನಾಗಿರುವ ಭಾರತ ತನ್ನ ಕೃಷಿ ವಲಯದ ಅಭಿವೃದ್ಧಿ ಮತ್ತು ನಿರ್ವಹಿಕೆಯತ್ತ, ಕೃಷಿ ಆಧಾರಿತ ಇಂಡಸ್ಟ್ರಿಗಳತ್ತ ಹೆಚ್ಚು ಗಮನ ನೀಡಬೇಕು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.