ನವದೆಹಲಿ: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನವನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿದ್ದಾರೆ. ಮಾತ್ರವಲ್ಲದೇ ಭಾರತ ’ಮಾನವ ತ್ಯಾಜ್ಯ’ದ ಬಗೆಗಿನ ಯುದ್ಧವನ್ನು ಜಯಿಸುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಗೇಟ್ಸ್ನೋಟ್ಸ್.ಕಾಮ್ಬ್ಲಾಗ್ನಲ್ಲಿ, ಮೋದಿಯ ಸ್ವಚ್ಛಭಾರತ ಮಾತ್ರವಲ್ಲದೇ ಮಾನವ ತ್ಯಾಜ್ಯದ ನಿರ್ವಹಣೆಯಲ್ಲಿ ಭಾರತ ಮಾಡುತ್ತಿರುವ ಸಾಧನೆಯನ್ನೂ ಪ್ರಶಂಸಿದ್ದಾರೆ.
‘ಸುಮಾರು 3 ವರ್ಷಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಆರೋಗ್ಯದ ಬಗ್ಗೆ ಅತ್ಯಂತ ಬೋಲ್ಡ್ ಕಾಮೆಂಟ್ ನೀಡಿದರು. ಆಯ್ಕೆಯಾದ ರಾಜಕಾರಣಿಯೊಬ್ಬನಿಂದ ಅಂತಹ ಹೇಳಿಕೆಯನ್ನು ನಾನು ಕೇಳಿಯೇ ಇಲ್ಲ. ಅಂತಹ ಸೂಕ್ಷ್ಮ ವಿಷಯವನ್ನು ರಾಷ್ಟ್ರ ನಾಯಕನೊಬ್ಬ ಭಾಷಣಕ್ಕೆ ಆರಿಸಿಕೊಳ್ಳುತ್ತಾನೆ ಎಂಬುದನ್ನು ನನಗೆ ಊಹಿಸಲು ಸಾಧ್ಯವಾಗಲಿಲ್ಲ’ ಎಂದು ಪ್ರಧಾನಿಯವರ ಮೊದಲ ಸ್ವಾತಂತ್ರ್ಯ ದಿನಾಚರಣೆ ಭಾಷಣದ ಬಗ್ಗೆ ಬಿಲ್ಗೇಟ್ಸ್ ಉಲ್ಲೇಖಿಸಿದ್ದಾರೆ.
’೨೧ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದೇವೆ. ಆದರೂ ನಮ್ಮ ತಾಯಂದಿರು, ಸಹೋದರಿಯರು ಬಯಲುಶೌಚಕ್ಕೆ ಹೋಗುತ್ತಾರೆ. ಗ್ರಾಮಗಳಲ್ಲಿ ಬಡ ಮಹಿಳೆಯರು ಕತ್ತಲು ಆವರಿಸುವವರೆಗೆ ಬಹಿರ್ದೆಸೆಗಾಗಿ ಕಾಯುತ್ತಾರೆ. ಎಷ್ಟು ಕಿರಿಕಿರಿ ಆವರಿಗಾಗಿರಬೇಡ, ಮಹಿಳೆಯರ ಘನತೆಗಾಗಿ ಟಾಯ್ಲೆಟ್ನ್ನು ನಾವು ಕಟ್ಟಬಾರದೇ? ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು.ಅವರ ಈ ಭಾಷಣ ಬಿಲ್ಗೇಟ್ಸ್ ಅವರ ಪ್ರಶಂಸೆಗೆ ಕಾರಣವಾಗಿದೆ.
ಶುಚಿತ್ವದ ಕಾರಣದಿಂದಾಗಿ ಭಾರತಕ್ಕೆ 106 ಕೋಟಿ ಡಾಲರ್ ನಷ್ಟವಾಗುತ್ತಿದೆ. ಮಾನವ ತ್ಯಾಜ್ಯದಿಂದ ಹರಡುವ ರೋಗಗಳ ಚಿಕಿತ್ಸೆಗೆಯೇ ಹೆಚ್ಚಿನ ಹಣ ವ್ಯಯವಾಗುತ್ತದೆ ಎಂದು ಬಿಲ್ಗೇಟ್ಸ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.