ನವದೆಹಲಿ: ಸರ್ಕಾರಿ ಸಭೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವಂತೆ ಪ್ರಾಣಿಗಳ ಕಲ್ಯಾಣ ಸಂಸ್ಥೆ ’ಪೇಟಾ’ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದೆ.
ಜರ್ಮನಿಯ ಪರಿಸರ ಸಚಿವೆ ಬಾರ್ಬರ ಹೆಂಡ್ರಿಕ್ ಅವರು ಇತ್ತೀಚಿಗೆ ತನ್ನೆಲ್ಲಾ ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಿದ್ದರು, ಇದರ ಬೆನ್ನಲ್ಲೆ ಪೇಟಾ ಪ್ರಧಾನಿಗೆ ಈ ಮನವಿಯನ್ನು ಮಾಡಿಕೊಂಡಿದೆ.
ಮೋದಿಯೂ ಹೆಂಡ್ರಿಕ್ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೇಟಾ ಮನವಿ ಮಾಡಿದ್ದು, ಇದರಿಂದ ಹಸಿರು ಮನೆ ಅನಿಲವನ್ನು ತಡೆಗಟ್ಟಲು ಮತ್ತು ಹವಮನ ವೈಪರೀತ್ಯದ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ.
ಸಸ್ಯಹಾರಿಯಾಗಿರುವ ಮೋದಿ ಸ್ವತಃ ಒರ್ವ ರೋಲ್ ಮಾಡೆಲ್ ಆಗಿದ್ದು, ಸರ್ಕಾರಿ ಸಭೆ, ಸಮಾರಂಭಗಳಲ್ಲೂ ಅವರು ಮಾಂಸಾಹಾರ ಬಳಕೆಯಾಗುವುದನ್ನು ತಡೆಯಬೇಕು ಎಂದು ಪೇಟಾ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.