ಇಟವ: ಉತ್ತರಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು 4 ಲಕ್ಷ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಇರಿಸಿಕೊಂಡಿದ್ದಾರೆ. ಇದೀಗ ಎಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಬಿಲ್ನ್ನು ಪಾವತಿ ಮಾಡಬೇಕು ಎಂದು ಅಧಿಕಾರಿಗಳು ಅವರಿಗೆ ತಾಕೀತು ಮಾಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ ಅವರು ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಲು ಕ್ರಮಕೈಗೊಂಡ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಅವರ ಮನೆಗೆ ಭೇಟಿ ನೀಡಿದ ವಿದ್ಯುತ್ ಅಧಿಕಾರಿಗಳ ತಂಡ ಅನುಮತಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ನ್ನು ಅವರ ಮನೆಯಲ್ಲಿ ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದೆ.
ನಿತ್ಯ 5ಕೆ ವ್ಯಾಟ್ ವಿದ್ಯುತ್ ಬಳಸಲು ಅನುಮತಿ ಇದೆ, ಆದರೆ ಅದರ ೮ ಪಟ್ಟು ಹೆಚ್ಚು ವಿದ್ಯುತ್ನ್ನು ಮುಲಾಯಂ ಮನೆಯಲ್ಲಿ ವ್ಯಯಿಸಲಾಗುತ್ತಿದೆ. ಇಟವದಲ್ಲಿರುವ ಅವರ ಮನೆಯಲ್ಲಿ 12 ರೂಮ್ಗಳಿವೆ, ಸ್ವತಃ ಏರ್ ಕಂಡಿಷನ್ ಪ್ಲಾಂಟ್ನ್ನು ಅದು ಹೊಂದಿದೆ, ಮಾತ್ರವಲ್ಲ ಇಲ್ಲಿ ಏರ್ಕಂಡಿಷನಿಂಗ್ ಸ್ವಿಮ್ಮಿಂಗ್ ಪೂಲ್ಗಳಿವೆ. ಹಲವಾರು ಇಲವೇಟರ್ಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.