ಮುಂಬಯಿ: ರೈಲ್ವೇಯ ಜಾಗದಲ್ಲಿ ವಾಸಿಸುತ್ತಿರುವ 12 ಲಕ್ಷ ಸ್ಲಂ ನಿವಾಸಿಗಳಿಗೆ ಸೂರು ಒದಗಿಸುವ ಮಹಾರಾಷ್ಟ್ರದ ಸರ್ಕಾರದ ಮಹತ್ವದ ಯೋಜನೆಗೆ ಕೈಜೋಡಿಸಲು ಭಾರತೀಯ ರೈಲ್ವೇ ಮುಂದಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನೊಳಗೊಂಡ ಸಭೆಯಲ್ಲಿ ರೈಲ್ವೇ ಮತ್ತು ಕೊಳಚೆ ಪುನರ್ವಸತಿ ಮಂಡಳಿಯ ನಡುವೆ ಸ್ಲಂ ನಿವಾಸಿಗಳ ಪುನರ್ವಸತಿ ಬಗ್ಗೆ ಒಪ್ಪಂದ ನಡೆದಿದೆ.
ಇದರನ್ವಯ ರೈಲ್ವೇಯ 78 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಇದರಲ್ಲಿ 41.2 ಎಕರೆ ವೆಸ್ಟರ್ನ್ ರೈಲ್ವೇಗೆ ಸೇರಿದ್ದಾಗಿದ್ದರೆ, 37.7 ಎಕರೆ ಸೆಂಟ್ರಲ್ ರೈಲ್ವೇಗೆ ಸೇರಿದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.