ಗುವಾಹಟಿ: ಭಾರತದ ಅತೀ ಉದ್ದದ ಸೇತುವೆ ಇನ್ನು ಒಂದು ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದೆ.
ಮುಂದಿನ ವರ್ಷ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 9 ಕಿಲೋಮೀಟರ್ ಉದ್ದದ ಧೋಲಾ-ಸದಿಯಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ರಹ್ಮಪುತ್ರದ ಉಪನದಿ ಲೋಹಿತ್ನ ಮೇಲೆ ಈ ಅತೀ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ.
ಗುವಾಹಟಿಯಿಂದ 540 ಕಿಲೋಮೀಟರ್ ದೂರದಲ್ಲಿರುವ ಸದಿಯಾದಲ್ಲಿ ಈ ಸೇತುವೆ ಆರಂಭವಾಗಲಿದ್ದು, ಅರುಣಾಚಲ ರಾಜಧಾನಿ ಇತನಗರದಿಂದ 300 ಕಿಲೋಮೀಟರ್ ದೂರದಲ್ಲಿರುವ ಧೋಲಾದಲ್ಲಿ ಅಂತ್ಯಗೊಳ್ಳಲಿದೆ.
ಮುಂಬಯಿಯ ಪ್ರಖ್ಯಾತ ಬಾಂದ್ರ-ವರ್ಲಿ ಸೀಲಿಂಕ್ಗಿಂತ ಇದು ಶೇ.30ರಷ್ಟು ಹೆಚ್ಚು ಉದ್ದವಿರಲಿದೆ. ಈ ಸೇತುವೆ ಲೋಕಾರ್ಪಣೆಗೊಂಡರೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಣ ಪ್ರಯಾಣ ಸಮಯ 4 ಗಂಟೆಗಳಷ್ಟು ಕಡಿಮೆಯಾಗಲಿದೆ.
2011ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿದ್ದು, 950 ಕೋಟಿ ವೆಚ್ಚವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.