ಅಹ್ಮದಾಬಾದ್ನಿಂದ 180 ಕಿ.ಮೀ ದೂರದಲ್ಲಿರುವ ಕಚ್ಛ್ನ ಪುಟ್ಟ ರಣ್ ಇದೀಗ ಡಿಜಿಟಲ್ ಜಗತ್ತಿಗೆ ಪರಿಚಿತಗೊಂಡಿದೆ. ಇಲ್ಲಿನ 10 ಸಾವಿರ ಕುಟುಂಬಗಳು ಇದೀಗ ಇಂಟರ್ನೆಟ್ ಪಡೆದುಕೊಂಡಿದೆ. ಸಿಂಗಲ್ ವೈಟ್ ವ್ಯಾನಿಗೆ ರಿಮೋಟ್ ವೈ-ಫೈ ಕನೆಕ್ಟ್ ಮಾಡಿ ಇಲ್ಲಿಗೆ ಇಂಟರ್ನೆಟ್ ಒದಗಿಸಲಾಗುತ್ತಿದೆ.
ಉಪ್ಪು ಮರುಭೂಮಿಯಲ್ಲಿರುವ ಈ ರಣ್ ಜನತೆ ವರ್ಷದಲ್ಲಿ 8 ತಿಂಗಳುಗಳ ಕಾಲ ಅತ್ಯಂತ ತೀವ್ರ ತಾಪಮಾನ ಪರಿಸ್ಥಿತಿಯಲ್ಲಿ ಬದುಕುತ್ತಾರೆ. ವಿದ್ಯುತ್ ಇಲ್ಲದೆ ಕಾರ್ಮಿಕರು ದುಡಿಯುತ್ತಾರೆ, ಮಣ್ಣಿನ ಗುಡಿಸಲುಗಲೇ ಇಲ್ಲಿನ ಮಕ್ಕಳಿಗೆ ಶಾಲೆಗಳು. ಇಲ್ಲಿನ ಸಮುದಾಯಗಳು ಸಮಸ್ಯೆಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಇಂಟರ್ನೆಟ್ ಕಲ್ಪಿಸುವುದು ಸುಲಭದ ಮಾತಲ್ಲ.
ಆದರೆ ಎನ್ಜಿಓ ಅಗರಿಯ ಹಿತರಕ್ಷಕ್ ಮಂಚ್ನ ಶತಪ್ರಯತ್ನದ ಫಲವಾಗಿ ಕಚ್ಛ್ಗೆ ಇಂಟರ್ನೆಟ್ ತಲುಪಿದೆ. ಮೊದಲಿಗೆ ಈ ಎನ್ಜಿಓ ತಂಡ ಮರುಭೂಮಿಯ ಹೊರವಲಯದಲ್ಲಿ ಡಿಜಿಟಲ್ ಟವರ್ನ್ನು ಎನ್ಜಿಓ ಸ್ಥಾಪಿಸಿತು, ಈ ಟವರ್ ಸುಮಾರು 60 ಕಿ.ಮೀಗಳಿಗೆ ಕನೆಕ್ಟಿವಿಟಿ ರೇಡಿಯಸ್ನ್ನು ಪಸರಿಸುತ್ತದೆ. ಬಳಿಕ ವ್ಯಾನ್ ಮೇಲೆ ಆಂಟೆನಾ ಸಿಕ್ಕಿಸಿದರು, ಜನರಿಗೆ ಲ್ಯಾಪ್ಟಾಪ್, ಪ್ರಿಂಟರ್ಸ್ ಮತ್ತು ಟ್ಯಾಬ್ಲೆಟ್ಗಳನ್ನು ವಿತರಿಸಿದರು.
ಅಷ್ಟಕ್ಕೆ ಎನ್ಜಿಓ ಕಾರ್ಯ ಮುಗಿದಿಲ್ಲ, ಅದು ಪ್ರತಿ ವಾರ ಶಾಲೆಗಳಿಗೆ ತೆರಳಿ ಇಂಟರ್ನೆಟ್ ಮತ್ತು ಡಿಜಿಟಲ್ ಸ್ಕಿಲ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಸೈನ್ಸ್ ಮತ್ತು ಗಣಿತಗಳ ಆನ್ಲೈನ್ ವೀಡಿಯೋಗಳನ್ನು ಮಕ್ಕಳಿಗೆ ತೋರಿಸುತ್ತಾರೆ. ಮಕ್ಕಳೂ ಬಹಳ ಆಸಕ್ತಿಯಿಂದ ಇದನ್ನು ಕಲಿಯುತ್ತಾರೆ.
ಮಕ್ಕಳ ಪೋಷಕರು ಆನ್ಲೈನ್ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ್ದಾರೆ. ಪ್ರಸ್ತುತ ಒಂದು ವ್ಯಾನ್ ವಾರದಲ್ಲಿ 3 ಶಾಲೆಗಳಿಗೆ ಭೇಟಿ ಕೊಡುತ್ತದೆ. ಈ ಮೂಲಕ ಡಿಜಿಟಲ್ ಇಂಡಿಯಾದ ನಿರ್ಮಾಣಕ್ಕೆ ಈ ಎನ್ಜಿಓ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.