ನವದೆಹಲಿ: ಮತಗಟ್ಟೆಯಿಂದ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಸಿಆರ್ಪಿಎಫ್ ಯೋಧನ ಮೇಲೆ ಶ್ರೀನಗರದಲ್ಲಿ ಉದ್ರಿಕ್ತ ಯುವಕರ ಗುಂಪೊಂದು ಹಲ್ಲೆ ಮಾಡುವ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. ಇದಕ್ಕೆ ಭಾರೀ ಖಂಡನೆಗಳು ವ್ಯಕ್ತವಾಗಿವೆ.
ಈ ಘಟನೆಯ ಬಗ್ಗೆ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆಜಾದಿ ಬೇಕಾದವರು ಕಾಶ್ಮೀರವನ್ನು ಬಿಟ್ಟು ತೊಲಗಲಿ ಎಂದು ಕಿಡಿಕಾರಿದ್ದಾರೆ.
ಟ್ವ್ವಿಟ್ ಮಾಡಿರುವ ಅವರು, ‘ನನ್ನ ಸೇನೆಯ ಯೋಧನ ಮೇಲೆ ಬೀಳುವ ಪ್ರತಿ ಏಟೂ ಕನಿಷ್ಠ 100 ಜಿಹಾದಿಗಳ ಜೀವ ತೆಗೆಯಬಹುದು. ಯಾರಿಗೆ ಆಜಾದಿ ಬೇಕೋ ಈಗಲೇ ತೊಲಗಿ, ಕಾಶ್ಮೀರ ನಮ್ಮದು’ ಎಂದಿದ್ದಾರೆ.
ಅಲ್ಲದೇ ‘ನಮ್ಮ ಧ್ವಜದ ಕೇಸರಿ ಬಣ್ಣ-ನಮ್ಮ ಕೋಪದ ಬೆಂಕಿ, ಬಿಳಿ ಬಣ್ಣ-ಜಿಹಾದಿಗಳ ಹೆಣದ ಹೊದಿಕೆ ಮತ್ತು ಹಸಿರು ಬಣ್ಣ- ಉಗ್ರರ ವಿರುದ್ಧ ನಮಗಿರುವ ದ್ವೇಷವನ್ನು ಪ್ರತಿಪಾದಿಸುತ್ತದೆ ಎಂಬುದನ್ನು ಭಾರತ ವಿರೋಧಿಗಳು ಮರೆಯಬಾರದು ಎಂದಿದ್ದಾರೆ.
ಯೋಧ ಕರ್ತವ್ಯ ಮುಗಿಸಿ ಬರುತ್ತಿದ್ದಾಗ ಜಿಹಾದಿಗಳು ಅವರ ಮೇಲೆರಗಿದ್ದರು, ಕೈಯಲ್ಲಿ ಗನ್ ಇದ್ದರೂ ಆ ಯೋಧ ತಣ್ಣಗಿದ್ದು ಎಲ್ಲವನ್ನೂ ಸಹಿಸಿಕೊಂಡಿದ್ದರು. ಈ ದೃಶ್ಯ ಪ್ರತಿಯೊಬ್ಬ ಭಾರತ ಪ್ರೇಮಿಯ ರಕ್ತವನ್ನು ಕುದಿಸುವಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.