ಲಕ್ನೋ: ಜನರಿಗೆ ಸಬ್ಸಿಡಿ ದರದಲ್ಲಿ ಆಹಾರಗಳನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ‘ಅನ್ನಪೂರ್ಣ ಭೋಜನಾಲಯ’ವನ್ನು ತೆರೆಯಲು ಮುಂದಾಗಿದ್ದಾರೆ.
ವಿದ್ಯಾರ್ಥಿಗಳಿಗೆ, ಕಡಿಮೆ ಆದಾಯವಿರುವ ಜನರಿಗೆ, ಕಾರ್ಮಿಕ ವರ್ಗದವರಿಗೆ, ರೋಗಿಗಳನ್ನು ನೋಡಿಕೊಳ್ಳುವವರಿಗೆ ಕಡಿಮೆ ದರದಲ್ಲಿ ಅನ್ನಪೂರ್ಣ ಭೋಜನಾಲಯ ಆಹಾರವನ್ನು ಒದಗಿಸಲಿದೆ.
ರಾಜ್ಯದ ಹಲವು ಕಡೆಗಳಲ್ಲಿ ಭೋಜನಾಲಯ ತೆರೆಯಲು ಸರ್ಕಾರ ಮುಂದಾಗಿದ್ದು, ಇಲ್ಲಿ ಕೇವಲ 3 ರೂಪಾಯಿಗೆ ಬೆಳಗಿನ ಉಪಹಾರ ಸಿಗಲಿದೆ, 5 ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗಲಿದೆ.
ಈ ಸೌಲಭ್ಯವನ್ನು ಪಡೆಯುವವರಿಗೆ ಪ್ರೀ ಪೇಯ್ಡ್ ಟೋಕನ್ ಮತ್ತು ಪ್ಲಾಸ್ಟಿಕ್ ಕಾರ್ಡ್ಗಳನ್ನು ನೀಡಲಾಗುತ್ತದೆ. ಒಂದು ವಾರಗಳ ತನಕ ಇದು ವ್ಯಾಲಿಡ್ ಆಗಿರಲಿದೆ. ಪ್ಲಾಸ್ಟಿಕ್ ಕಾರ್ಡ್ನ್ನು ಆಧಾರ್ಗೆ ಲಿಂಕ್ ಮಾಡಲಾಗುತ್ತದೆ.
ಎಲ್ಲಾ ಭೋಜನಾಲಯಗಳಲ್ಲೂ ಸ್ಟೀಲ್ ಪ್ಲೇಟ್ಗಳಲ್ಲಿ ಆಹಾರ ಸರ್ವ್ ಮಾಡಲಾಗುತ್ತದೆ, ವಾಟರ್ ಪ್ಯೂರಿಫೈಯರ್ಗಳನ್ನೂ ಅಳವಡಿಸಿಕೊಳ್ಳಲಾಗುತ್ತದೆ.
ಮೊದಲ ಹಂತವಾಗಿ ಗೋರಖ್ಪುರ್, ಲಕ್ನೋ, ಖಾನ್ಪುರ್, ಘಾಜಿಯಾಬಾದ್ಗಳಲ್ಲಿ ಇದನ್ನು ಆರಂಭಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.