ಶ್ರೀನಗರ: ಲಡಾಖ್ನ ಸುಂದರ ಹಿಮಶಿಖರ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಆಗಿರಬಹುದು , ಆದರೆ ಅಲ್ಲಿನ ಸ್ಥಳಿಯರು ಮಾತ್ರ ವರ್ಷವಿಡಿ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಇಲ್ಲಿನ ನೀರಿನ ಸಮಸ್ಯೆಯನ್ನು ತಡೆಗಟ್ಟುವುದಕ್ಕೆಂದೇ ಚೆವಾಂಗ್ ನೋರ್ಫೆಲ್ ಎಂಬ ವ್ಯಕ್ತಿ ತಮ್ಮ ಎಂಜಿನಿಯರಿಂಗ್ ಕೌಶಲ್ಯವನ್ನು ಅದ್ಭುತ ಎಂಬ ರೀತಿ ಅನುಷ್ಠಾನಗೊಳಿಸಿದ್ದಾರೆ.
ಅತೀ ತಣ್ಣಗಿನ ಮತ್ತು ಒಣ ಪರ್ವತ ಪ್ರದೇಶವಾದ ಇಲ್ಲಿ ಅವರು ಕೃತಕ ಗ್ಲೋಸಿಯರ್ಸ್ (ಹಿಮನದಿ)ಗಳನ್ನು ನಿರ್ಮಿಸಿದ್ದಾರೆ. ಇದರ ಮೂಲಕ ಜನರ ನೀರಿನ ಅಭಾವವನ್ನು ಕುಗ್ಗಿಸಿದ್ದಾರೆ.
79 ವರ್ಷದ ಚೆವಾಂಗ್ ನಿರ್ವತ್ತ ಸಿವಿಲ್ ಎಂಜಿನಿಯರ್, ಸಮಸ್ಯೆಗಳಿಗೆ ಪರಿಹಾರ ನೀಡಲು ಇವರು ಸದಾ ಸಿದ್ಧ. 1966ರಲ್ಲಿ ಇವರು ಲಡಾಖ್ ಅತೀ ಹಿಂದುಳಿದ ಪ್ರದೇಶ ಝಂಸ್ಕಾರ್ಗೆ ಸಬ್ ಡಿವಿಜನಲ್ ಆಫೀಸರ್ಗೆ ಆಗಿ ನೇಮಕಗೊಂದ ಬಳಿಕ ಇವರು ತಮ್ಮ ತಂಡದೊಂದಿಗೆ ಶಾಲೆ, ಬ್ರಿಡ್ಜ್, ಕೆನಲ್, ರಸ್ತೆಗಳನ್ನು ನಿರ್ಮಿಸಿದರು. ಅಲ್ಲಿ ಕಾರ್ಮಿಕ ಕೌಶಲ್ಯವಿಲ್ಲ ಎಂಬುದನ್ನು ಅರಿತ ಅವರು ಅಲ್ಲಿನ ಜನರಿಗೆ ತರಬೇತಿಯನ್ನು ನೀಡಲಾರಂಭಿಸಿ ಅವರನ್ನು ಕೌಶಲ್ಯಭರಿತರನ್ನಾಗಿಸಿದರು. ಇದರಿಂದಾಗಿ ಮೇಸ್ತ್ರಿ ಕೆಲಸ ಮಾಡುತ್ತಾ ಅವರು ಕೈತುಂಬಾ ಹಣ ಸಂಪಾದನೆ ಮಾಡಲಾರಂಭಿಸಿದರು.
ಬಳಿಕ ಅಲ್ಲಿನ ಜನ ಪ್ರಮುಖವಾಗಿ ಎದುರಿಸುತ್ತಿದ್ದ ನೀರಿನ ಸಮಸ್ಯೆಯನ್ನು ನಿವಾರಿಸಲು ಅದೇ ಕೌಶಲ್ಯಭರಿತ ಜನರನ್ನು ಇಟ್ಟುಕೊಂಡು ಕೃತಕ ಹಿಮನದಿಗಳನ್ನು ಸೃಷ್ಟಿಸಿದರು. ಇದರಿಂದ ಅಲ್ಲಿನ ಜನರ ನೀರಿನ ಭವನೆ ಕಡಿಮೆಯಾಯಿತು.
ಇಷ್ಟೆಲ್ಲಾ ಸಾಧನೆ ಮಾಡಿದ ಚೆವಾಂಗ್ ನೋರ್ಫೆಲ್ ಅವರನ್ನು ‘ಐಸ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.