ನವದೆಹಲಿ: ವಿಶ್ವವಿಖ್ಯಾತ ಬಂಗಾಳಿ ಕಲಾವಿದ ಜಮಿನಿ ರಾಯ್ ಅವರ ಜನ್ಮದಿನಾಚರಣೆಯನ್ನು ಗೂಗಲ್ ಅದ್ಭುತ ಡೂಡಲ್ ವಿನ್ಯಾಸದ ಮೂಲಕ ಆಚರಿಸಿದೆ.
ರಾಯ್ ಅವರು 20ನೇ ಶತಮಾನದ ಭಾರತ ಕರ ಕುಶಲ ಕಲೆಯ ಒರ್ವ ಪ್ರಮುಖ ಆಧುನಿಕ ಕಲಾವಿದ. 1955ರಲ್ಲಿ ಪದ್ಮ ಭೂಷಣ ಗೌರವಕ್ಕೂ ಇವರು ಪಾತ್ರರಾಗಿದ್ದರು.
ಅಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ನೈಸರ್ಗಿಕ ಬಣ್ಣಗಳನ್ನು ಹೊರತಾಗಿಸಿ ಇವರು ಬೋಲ್ಡ್, ಫ್ಲ್ಯಾಟ್ನಂತಹ ಬೆರಗುಗೊಳಿಸುವ ಬಣ್ಣಗಳನ್ನು ಬಳಸುತ್ತಿದ್ದರು. ಇಂಡಿಯನ್ ರೆಡ್, ಹಳದಿ ಕಾವೆಮಣ್ಣು, ಕಾಡ್ಮಿಂಯಮ್ ಹಸಿರು, ವರ್ಮಿಲನ್, ಬೂದು ಮತ್ತು ಬಿಳಿ ಬಣ್ಣಗಳನ್ನು ಮಾತ್ರ ಬಳಕೆ ಮಾಡುತ್ತಿದ್ದುದು ಇವರ ವಿಶೇಷ.
ಕವಿ ರವೀಂದ್ರ ನಾಥ ಠಾಗೋರ್ ಅವರ ಅತೀ ಜನಪ್ರಿಯ ಶಿಷ್ಯ ಎಂಬ ಖ್ಯಾತಿಯನ್ನೂ ಇವರು ಹೊಂದಿದ್ದಾರೆ. 1887ರಲ್ಲಿ ಬಂಗಾಳದ ಬಂಕುರ ಪ್ರದೇಶದಲ್ಲಿ ಜನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.