ನವದೆಹಲಿ: ಮಾನಸ ಸರೋವರ ಯಾತ್ರೆಗೆ ಈ ವರ್ಷ ಒಟ್ಟು 4 ಸಾವಿರ ಅರ್ಜಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದೆ. ಕಳೆದ ಬಾರಿಗಿಂತ ಈ ಬಾರಿ 1800 ಅರ್ಜಿಗಳು ಹೆಚ್ಚಾಗಿವೆ.
ಈ ಬಗೆಗಿನ ವಿವರಗಳನ್ನು ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ಒಟ್ಟು 4,442 ಅರ್ಜಿಗಳು ಬಂದಿವೆ. ಕಂಪ್ಯೂಟರ್ ಮೂಲಕ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ’ ಎಂದಿದ್ದಾರೆ.
2016ರಲ್ಲಿ 2,600 ಅರ್ಜಿಗಳು ಬಂದಿದ್ದವು. ಈ ಬಾರಿ 4,442 ಅರ್ಜಿಗಳು ಬಂದಿವೆ. ಯಾತ್ರೆಯನ್ನು ಸುಲಲಿತಗೊಳಿಸುವುದು, ಹೆಚ್ಚಿನ ಜನರಿಗೆ ಯಾತ್ರೆ ಕೈಗೊಳ್ಳುವ ಅವಕಾಶ ಕೊಡುವುದು ನಮ್ಮ ಆದ್ಯತೆ ಎಂದಿದ್ದಾರೆ.
ಈ ವರ್ಷದಿಂದ ಒಂದು ಕುಟುಂಬದ 4 ಮಂದಿ ಒಂದೇ ತಂಡದಲ್ಲಿ ಯಾತ್ರೆ ಕೈಗೊಳ್ಳಬಹುದಾಗಿದೆ ಎಂದಿದ್ದಾರೆ.
3,303 ಅರ್ಜಿಗಳು ಪುರುಷರಿಂದ ಬಂದಿದ್ದರೆ, 1139 ಅರ್ಜಿಗಳು ಮಹಿಳೆಯರಿಂದ ಬಂದಿವೆ. ಇದರಲ್ಲಿ 826 ಅರ್ಜಿ ಹಿರಿಯ ನಾಗರಿಕರದ್ದಾಗಿ ಎಂದು ಮಾಹಿತಿ ನೀಡಿದ್ದಾರೆ.
4 ತಿಂಗಳ ಅವಧಿಯ ಯಾತ್ರೆ ಇದಾಗಿದ್ದು, ಜೂನ್ನಲ್ಲಿ ಆರಂಭಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.