ಮುಂಬಯಿ: ಮುಂಬಯಿಯ ಎಲ್ಲಾ ಸಬ್ಅರ್ಬನ್ ರೈಲ್ವೇ ಸ್ಟೇಶನ್ಗಳಲ್ಲಿ ಸುಮಾರು 100 ಎಸ್ಕಲೇಟರ್ಗಳನ್ನು ನಿರ್ಮಿಸಲು ರೈಲ್ವೇ ಯೋಜನೆ ರೂಪಿಸಿದೆ.
ಸೆಂಟ್ರಲ್ ರೈಲ್ವೇ ಮತ್ತು ವೆಸ್ಟರ್ನ್ ರೈಲ್ವೇ ಈ ಯೋಜನೆಯನ್ನು ಆರಂಭಿಸಿದ್ದು, 2018ರೊಳಗೆ ಎಲ್ಲಾ ಎಸ್ಕಲೇಟರ್ಗಳು ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ.
ಪ್ರಸ್ತುತ ಒಟ್ಟು 47ಮುಂಬಯಿ ಸ್ಟೇಶನ್ಗಳಲ್ಲಿ ಎಸ್ಕಲೇಟರ್ಗಳಿವೆ. 15 ಸೆಂಟ್ರಲ್ ರೈಲ್ವೇಸ್ನಲ್ಲಿದ್ದರೆ, 26 ವೆಸ್ಟರ್ನ್ ರೈಲ್ವೇಸ್ಗಳಲ್ಲಿವೆ.
ವಯಸ್ಸಾದವರಿಗೆ, ಗರ್ಭಿಣಿಯರಿಗೆ, ವಿಕಲಚೇತನರಿಗೆ ಪ್ಲಾಟ್ಫಾರ್ಮ್ಗಳನ್ನು ಹತ್ತಿ ಇಳಿಯಲು ಸುಲಭವಾಗಲಿ ಎಂಬ ಉದ್ದೇಶದೊಂದಿಗೆ ಈ ಎಸ್ಕಲೇಟರ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.