ಗುರುಗ್ರಾಮ್: ಹರಿಯಾಣದ ಗುರುಗ್ರಾಮ್ನಲ್ಲಿ ದರೋಡೆಕೋರರೊಂದಿಗೆ ಹೋರಾಡಿ ಗೆದ್ದ ಇಬ್ಬರು ಮಹಿಳೆಯರಿಗೆ ಅಲ್ಲಿನ ಪೊಲೀಸ್ ಕಮಿಷನರ್ ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಣ ವರ್ಗಾವಣೆ ಕೇಂದ್ರಕ್ಕೆ ಲಗ್ಗೆ ಇಟ್ಟ ಇಬ್ಬರು ಶಸ್ತ್ರಸಜ್ಜಿತ ದರೊಡೆಕೋರರನ್ನು ಅಲ್ಲೇ ಕೆಲಸ ಮಾಡುವ ವಿಮ್ಲಾ ದೇವಿ ಎಂಬ 42 ವರ್ಷದ ಮಹಿಳೆ ಮತ್ತು ಪೂನಂ ಎಂಬ 28 ವರ್ಷ ಯುವತಿ ಧೈರ್ಯದಿಂದ ಎದುರಿಸಿ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಈ ಇಬ್ಬರು ದರೋಡೆಕೋರರು ಈಗ ಪೊಲೀಸರ ವಶದಲ್ಲಿದ್ದಾರೆ.
ಅವರ ಈ ಸಾಹಸಮಯ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದರೋಡೆಕೋರರು ಒಳಬಂದೊಡನೆ ಪಿಸ್ತೂಲ್ ತೋರಿಸಿ ಮಹಿಳೆಯರನ್ನು ಹೆದರಿಸಲು ಪ್ರಯತ್ನಿಸಿದರು, ಆದರೆ ಧೈರ್ಯಗೆಡದ ಮಹಿಳೆಯರು ಅವರೊಂದಿಗೆ ಕಾದಾಡಿ ಪಿಸ್ತೂಲನ್ನು ಕಿತ್ತುಕೊಳ್ಳಲು ಯಶಸ್ವಿಯಾಗಿದ್ದರು. ಈ ಸಿಸಿಟಿವಿ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಮಹಿಳೆಯರ ಸಾಹಸ ಎಂತಹುದು ಎಂಬುದನ್ನು ತೋರಿಸಿದ್ದಾರೆ.
ಈ ಇಬ್ಬರು ಮಹಿಳೆಯರಿಗೆ ಪೊಲೀಸ್ ಕಮಿಷನರ್ ತಲಾ 5 ಸಾವಿರ ರೂಪಾಯಿ ಬಹುಮಾನವನ್ನು ನೀಡಿ, ಸನ್ಮಾನ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.