ನವದೆಹಲಿ: ದೆಹಲಿ ಸಮೀಪ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಜನಾಂಗೀಯ ದ್ವೇಷದ ದಾಳಿಗಳಲ್ಲ, ಅದು ಅಪರಾಧ ಕೃತ್ಯಗಳು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಈ ದಾಳಿಗಳ ಹಿನ್ನಲೆಯಲ್ಲಿ ಭಾರತವನ್ನು ಅನ್ಯದ್ವೇಷಿ ರಾಷ್ಟ್ರ ಎಂದು ಆಫ್ರಿಕಾ ರಾಯಭಾರಿ ಟೀಕಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ ಎಂದಿರುವ ಅವರು, ಉದ್ರಿಕ್ತ ಜನರ ಗುಂಪು ಈ ದಾಳಿಗಳನ್ನು ಮಾಡಿದೆ, ಹೀಗಾಗಿ ಇದು ಜನಾಂಗೀಯ ದಾಳಿ ಎನ್ನುವುದು ತಪ್ಪು. ಭಾರತೀಯರೂ ಆಫ್ರಿಕಾದಲ್ಲಿ ಕೊಲೆಯಾಗಿದ್ದಾರೆ, ನಾವು ಅವರ ವಿರುದ್ಧ ಜನಾಂಗೀಯ ಆರೋಪ ಮಾಡಿದ್ದೇವೆಯೇ?’ ಎಂದು ಪ್ರಶ್ನಿಸಿದ್ದಾರೆ.
ಕಳೆದ ವಾರ ಗ್ರೇಟರ್ ನೋಯ್ಡಾದಲ್ಲಿ ನಾಲ್ವರು ಆಫ್ರಿಕನ್ನರ ಮೇಲೆ ಗುಂಪೊಂದು ದಾಳಿ ಮಾಡಿತ್ತು, ಒಬ್ಬ ಸ್ಕೂಲ್ ಹುಡುಗ ಮೃತನೂ ಆಗಿದ್ದ. ಡ್ರಗ್ ಸೇವನೆ ಹೆಚ್ಚಾದ ಪರಿಣಾಮ ಈತ ಮೃತಪಟ್ಟಿರಲೂ ಬಹುದು ಎನ್ನಲಾಗಿದೆ.
ಅದಾದ ಬಳಿಕವೂ ಅಲ್ಲಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ದಾಳಿ ನಡೆದ ವರದಿಗಳಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.