ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ದೆಹಲಿ ಸಿಎಂ ಅದಕ್ಕ ತಗಲುವ ಎಲ್ಲಾ ವೆಚ್ಚವನ್ನೂ ಸರ್ಕಾರದ ಬೊಕ್ಕಸದಿಂದಲೇ ಭರಿಸುತ್ತಿದ್ದಾರೆ. ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು, ಕೇಜ್ರಿವಾಲ್ ವಿರುದ್ಧ ಟೀಕೆಗಳು ಕೇಳಿ ಬಂದಿವೆ.
ಆದರೆ ಮೊಂಡು ವಾದವನ್ನು ಇಲ್ಲೂ ಮುಂದುವರೆಸಿರುವ ಕೇಜ್ರಿವಾಲ್, ಸರ್ಕಾರದ ಬೊಕ್ಕಸದಿಂದ ಕಾನೂನು ಹೋರಾಟಕ್ಕೆ ಹಣ ವ್ಯಯಿಸುತ್ತಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯ ಸೀಮಾಪುರಿಯಲ್ಲಿ ಸ್ಥಳಿಯ ಚುನಾವಣೆಯ ಹಿನ್ನಲೆಯಲ್ಲಿ ಸಮಾವೇಶ ನಡೆಸಿ ಮಾತನಾಡಿದ ಅವರು, ‘ದೆಹಲಿ ಕ್ರಿಕೆಟ್ನಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು, ಆಯ್ಕೆಗೆ ಹಣ ಕೇಳುತ್ತಿದ್ದಾರೆ ಎಂದು ಯುವಕರು ದೂರುತ್ತಿದ್ದರು. ನಾನು ಇದರ ಬಗ್ಗೆ ತನಿಖೆ ಆರಂಭಿಸಿದೆ. ಬಿಜೆಪಿ ನನ್ನ ವಿರುದ್ಧ ಪ್ರಕರಣ ದಾಖಲಿಸಿತು. ನಾವು ಕಾನೂನು ಹೋರಾಟಕ್ಕೆ ಜೇಠ್ಮಲಾನಿಯನ್ನು ನೇಮಿಸಿದೆವು. ಇದಕ್ಕೆ ಸರ್ಕಾರ ಯಾಕೆ ಹಣ ಪಾವತಿಸಬೇಕು ಎಂದು ಅವರು ಕೇಳುತ್ತಿದ್ದಾರೆ. ಹಾಗಾದರೆ ನಾನು ನನ್ನ ಕಿಸೆಯಿಂದ ಹಣ ವ್ಯಯಿಸಬೇಕೇ?’ ಎಂದು ನೆರದಿದ್ದವರಿಗೆ ಪ್ರಶ್ನೆ ಹಾಕಿದ್ದಾರೆ. ಆದಕ್ಕೆ ಕೆಲವರು ’ನೋ’ ಎಂದು ಪ್ರತಿಕ್ರಿಯಿಸಿದ್ದಾರೆ.
ಜೇಠ್ಮಲಾನಿ ಅವರ 3.8 ಕೋಟಿ ಬಿಲ್ನ್ನು ಕೇಜ್ರಿವಾಲ್ ಸರ್ಕಾರದ ಬೊಕ್ಕಸದಿಂದಲೇ ಪಾವತಿ ಮಾಡಿರುವುದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಹಿಂದೆ ವೈಯಕ್ತಿಕ ಸಾಮರ್ಥ್ಯದ ಮೇರೆಗೆ ನಾನು ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಕೇಜ್ರಿವಾಲ್, ಇದೀಗ ಸರ್ಕಾರದ ಹೋರಾಟ ಎನ್ನುತ್ತಿರುವುದು ಹಲವರ ಟೀಕೆಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.