ನವದೆಹಲಿ: ಪುಸ್ತಕಗಳನ್ನು ಓದುವವರಿಗೆ ಒಂದು ಸಿಹಿ ಸುದ್ದಿಯಂತೆ ಐಐಟಿ ಖರಗ್ಪುರ್ 65 ಲಕ್ಷ ಗ್ರಂಥ, ಪುಸ್ತಕಗಳು, ಸಂಶೋಧನೆ, ಪ್ರಬಂಧ, ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ್ (ಐಐಟಿ-ಕೆ) ನ್ಯಾಶನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್ಫೋನ್ ಹೊಂದಿದವರು ಈ ಆ್ಯಪ್ ಡೌನ್ಲೋಡ್ ಮಾಡಿ ಪುಸ್ತಕಗಳನ್ನು ಓದಬಹುದು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಈ ಯೋಜನೆ ಅಡಿಯಲ್ಲಿ ಈಗ ಎಂಟು ರಾಜ್ಯಗಳ ಬೋರ್ಡ್ ಶಿಕ್ಷಣದ ಪುಸ್ತಕಗಳು, ಎನ್ಸಿಯಾರ್ಟಿ ಪಠ್ಯಪುಸ್ತಕಗಳು, ಜೆಇಇ, ಗೇಟ್ ಮತ್ತು ಯುಪಿಎಸ್ಸಿಯ ಈ ಹಿಂದಿನ ಪ್ರಶ್ನೆಪತ್ರಿಕೆಗಳು, ಆಡಿಯೋ-ಪುಸ್ತಕಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಎಸ್ಸಿ) ಮೊದಲಾದ ಸಂಸ್ಥೆಗಳು ಪ್ರಕಟಿಸುವ ಸಂಶೋಧನಾ ಲೇಖನಗಳನ್ನು ಹೊಂದಿದೆ.
ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿರುವ ಈ ಆ್ಯಪ್ ಪ್ರಸ್ತುತ ಆಂಡ್ರಾಯ್ಡ್ ಫೋನ್ಗಳಿಗೆ ಮಾತ್ರ ಲಭ್ಯವಿದ್ದು, ಮುಂದೆ ಇದನ್ನು ಆ್ಯಪಲ್ ಫೋನ್ಗಳಿಗೆ ಲಭ್ಯವಾಗುವಂತೆ ಮಾಡಲಾಗುದು. ಇದನ್ನು ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಿಗೂ ಬಳಸಬಹುದು. ಇಂದಿನ ಮೊಬೈಲ್ ಯುಗದಲ್ಲಿ ಎನ್ಡಿಎಲ್ ಆ್ಯಪ್ ದೇಶಾದ್ಯಂತ ಗ್ರಂಥಾಲಯಗಳ ಡಿಜಿಟಲ್ ಕಂಟೆಂಟ್ಗಳನ್ನು ಪಡೆಯಲು ಸಹಾಯಕವಾಗಲಿದೆ ಎಂದು ಐಐಟಿ ಖರಗ್ಪುರ್ ಅಧ್ಯಕ್ಷ ಪಿ.ಪಿ. ಚಕ್ರಬರ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.