ನವದೆಹಲಿ: 20 ದಿನಗಳೊಳಗೆ ಪಾಸ್ಪೋರ್ಟ್ ವೆರಿಫಿಕೇಶನ್ ಮಾಡದ, ದೂರು ದಾಖಲಾದ ದಿನವೇ ಎಫ್ಐಆರ್ನ ಪ್ರತಿಯನ್ನು ನೀಡದ, ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕವೂ ವಾಹನಗಳನ್ನು ಹಸ್ತಾಂತರ ಮಾಡದ ಪೊಲೀಸರು ಇನ್ನು ಮುಂದೆ 250 ರೂಪಾಯಿಯಿಂದ 5 ಸಾವಿರ ರೂಪಾಯಿಗಳವರೆಗೆ ದಂಡವನ್ನು ನೀಡಬೇಕಾಗುತ್ತದೆ.
ಈ ಬಗೆಗಿನ ನಿಯಮ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಪೊಲೀಸರು ಉತ್ತಮ ಸೇವೆಯನ್ನು ಜನರಿಗೆ ನೀಡಬೇಕು, ಪಾರದರ್ಶಕವಾಗಿ, ಪ್ರಾಮಾಣಿವಾಗಿ, ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಈ ದಂಡವನ್ನು ಶಿಫಾರಸ್ಸು ಮಾಡಿದೆ.
ಈ ಪೊಲೀಸ್ ರಿಸರ್ಚ್ ಮಂಡಳಿಯು ಒಟ್ಟು 45 ಸೇವೆಗಳನ್ನು ”ಸಾರ್ವಜನಿಕ ವಿತರಣಾ ಸೇವೆಗಳು’ ಎಂದು ಪಟ್ಟಿ ಮಾಡಿದ್ದು, ಇದರಲ್ಲಿ ಲೈಸೆನ್ಸ್ ನೀಡುವುದು, ಪಾಸ್ಪೋರ್ಟ್ ವೆರಿಫಿಕೇಶನ್, ಸಂಗೀತ ಕಾರ್ಯಕ್ರಮಗಳಿಗೆ ಅಭ್ಯಂತರವಿಲ್ಲ ಎಂಬ ಸರ್ಟಿಫಿಕೇಟ್ ನೀಡುವುದು, ಮರಣೋತ್ತರ ಪರೀಕ್ಷಾ ವರದಿ, ಅರೆಸ್ಟ್, ತನಿಖೆ ಹೊರತಾಗಿಯೂ ರೆಗ್ಯುಲರ್ ಪೊಲೀಸಿಂಗ್ ಮುಂತಾದವುಗಳು ಸೇರಿವೆ.
ಈ ಸೇವೆಗಳಲ್ಲಿ ವಿಳಂಬವನ್ನು ಮಾಡಿದ ಪೊಲೀಸರ ಮೇಲೆ ದಂಡ ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.