ಹೈದರಾಬಾದ್: ಭಾರತದ ಸಾಮಾನ್ಯ ಇಂಟರ್ನೆಟ್ ಸ್ಪೀಡ್ 2.5 Mbps (megabits per second ) ತಲುಪಿರುವ ಈ ಸಂದರ್ಭದಲ್ಲಿ, ಹೈದರಾಬಾದ್ ನಗರದಲ್ಲಿ 1 Gbps (gigabits per second ) ವೈಯರ್ಡ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸರ್ವಿಸ್ಗೆ ಚಾಲನೆ ನೀಡಿರುವುದಾಗಿ ಬೆಂಗಳೂರು ಮೂಲದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಆಕ್ಟ್ ಫೈಬರ್ನೆಟ್ ಘೋಷಿಸಿದೆ.
ಹೈದರಾಬಾದ್ ನಗರದಲ್ಲಿ ಈ ಸರ್ವಿಸ್ನ್ನು ಆರಂಭಿಸುವುದಕ್ಕಾಗಿ ಆಕ್ಟ್ ಫೈಬರ್ನೆಟ್ ಸಂಸ್ಥೆ ಕಳೆದ ಒಂದುವರೆ ವರ್ಷದಿಂದ ಶ್ರಮಪಟ್ಟಿದೆ, ಮಾತ್ರವಲ್ಲ ಈ ತಂತ್ರಜ್ಞಾನದ ಅಳವಡಿಕೆಗಾಗಿ 100 ಕೋಟಿ ರೂಪಾಯಿ ಬಂಡವಾಳ ಹೂಡಿದೆ.ಹೈದರಾಬಾದ್ನಲ್ಲಿ 1GB ಪ್ಲಾನ್ನನ್ನು ತಿಂಗಳಿಗೆ 5,999 ರೂಪಾಯಿಗಳಿಗೆ ನೀಡಲಾಗುತ್ತದೆ.
ಈ ಸರ್ವಿಸ್ಗೆ ತೆಲಂಗಾಣ ಐಟಿ ಸಚಿವ ಕೆ.ಟಿ.ರಾವ್ ಚಾಲನೆ ನೀಡಿದ್ದಾರೆ.
ಇನ್ನೂ 10 ನಗರಗಳಿಗೆ ಈ ಸರ್ವಿಸನ್ನು ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಮುಂದಿನ ಎರಡು ಹಣಕಾಸು ವರ್ಷದಲ್ಲಿ 1,200 ಕೋಟಿ ಬಂಡವಾಳವನ್ನು ಹೂಡುವ ಗುರಿಯನ್ನು ಇದು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.