ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈಶಾನ್ಯ ಪ್ರದೇಗಳ ಅಭಿವೃದ್ಧಿ ಸಚಿವಾಲಯವು ತಾಂತ್ರಿಕ ಶಿಕ್ಷಣದ ಭಾರತೀಯ ಮಂಡಳಿ ಎಇಸಿಟಿಇ) ಜೊತೆಗೂಡಿ ಎಪ್ರಿಲ್ 1 ಮತ್ತು 2ರಂದು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017’ ಗ್ರ್ಯಾಂಡ್ ಫಿನಾಲೆ ಆಯೋಜಿಸಲಿದೆ. ಕಾರ್ಯಕ್ರಮವು ಗುವಾಹಟಿಯ ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಡ್ ಟೆಕ್ನಾಲಜಿ (ಜಿಐಎಂಡಟಿ)ಯಲ್ಲಿ ಆಯೋಜಿಸಲಿದೆ.
ಇದು ಕರ್ನಾಟಕದ ಬೆಂಗಳೂರು, ಮಣಿಪಾಲ, ಹುಬ್ಬಳ್ಳಿ ಅಲ್ಲದೇ ಮುಂಬಯಿ, ಪುಣೆ, ನಾಗಪುರ, ಕೊಚಿನ್, ತಿರುವನಂತಪುರಂ, ಅಹ್ಮಾಬಾದ್, ಉದಯ್, ಚಂಡೀಗಢ, ಅಮೃತ್ಸರ, ನೋಯ್ಡಾ, ಘಾಜಿಯಾಬಾದ್, ಅಲ್ಲಹಾಬಾದ್, ಗುವಾಹಟಿ, ಇಂದೋರ್, ಭೋಪಾಲ್, ಕೋಲ್ಕತಾ, ಭುವನೇಶ್ವರ, ಚೆನ್ನೈ, ಕೋಯಮತ್ತೂರು ಮೊದಲಾದ ನಗರಗಳಲ್ಲಿ ನಡೆಯಲಿದ್ದು, ವಿವಿಧ ಇಲಾಖೆಗಳು ದಾಖಲಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲಾಗುವುದು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017, ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ರಾಜ್ಯ ಸಚಿವ (ಸ್ವತಂತ್ರ) ಅವರ ಸೂಕ್ತ ತಂತ್ರಜ್ಞಾನದ ಜೊತೆಗೆ ಡಿಜಿಟಲ್ ಪರಿಹಾರಗಳು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಪರಿಹಾರಗಳನ್ನು ವೇಗವನ್ನು ವರ್ಧಿಸುವ ಸಾಮರ್ಥ್ಯನ್ನು ಹೊಂದಿವೆ ಎಂಬ ಸಂದೇಶವನ್ನು ಸಾರುತ್ತದೆ.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ 10 ಸಾವಿಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, 26 ನಗರಗಳ 29 ಸಚಿವಾಲಯಗಳು ಮತ್ತು ಇಲಾಖೆಗಳು ಸಲ್ಲಿಸಿದ 598 ಸಮಸ್ಯೆಗಳಿಗೆ ಪರಿಹಾರ/ಉತ್ಪನ್ನಗಳನ್ನು ನಿರ್ಮಿಸಲು 36 ಗಂಟೆಗಳ ಕಾಲ ಕೆಲಸ ಮಾಡಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.