ನವದೆಹಲಿ: ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸುವ ಮೂಲಕ ಲೋಕಸಭೆಯಲ್ಲಿ ಹಣಕಾಸು ಬಿಲ್ 2017 ಜಾಗಿಗೊಳಿಸಲಾಗಿದೆ.
ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ಪ್ರಸ್ತಾಪಿಸಿದ್ದ 5 ತಿದ್ದುಪಡಿಗಳನ್ನು ಸರ್ಕಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾ ರಾಜ್ಯಸಭೆಯ ತಿದ್ದುಪಡಿಯನ್ನು ಬೆಂಬಲಿಸಿದ್ದು, ಇದು ರಾಜ್ಯಸಭೆಯ ಹಕ್ಕುಗಳ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅವರು ರಾಜಕೀಯ ಕಾರ್ಯಗಳಿಗೆ ಪ್ರತ್ಯೇಕ ಕಾನೂನು ರಚಿಸುವಂತೆ ಕೋರಿದ್ದಾರೆ.
ರಾಜ್ಯಸಭೆ ಭಾನುವಾರ ವಿರೋಧ ಪಕ್ಷದ 5 ತಿದ್ದುಪಡಿಗಳೊಂದಿಗೆ ಲೋಕಸಭೆಗೆ ಹಣಕಾಸು ಬಿಲ್ 2017ನ್ನು ಹಿಂದಿರುಗಿಸಿತ್ತು.
2017-18ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಈ ಆರ್ಥಿಕ ಪ್ರಸ್ತಾಪಗಳು ಹೆಚ್ಚು ಪರಿಣಾಮಕಾರಿಯಾಗಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.