ಲಕ್ನೋ: ಇದನ್ನು ಯೋಗಿ ಎಫೆಕ್ಟ್ ಎನ್ನುತ್ತೀರೋ ಅಥವಾ ಆಗಲೇ ಬೇಕಿದ್ದ ಬದಲಾವಣೆ ಎನ್ನುತ್ತಿರೋ ಒಟ್ಟಿನಲ್ಲಿ ಉತ್ತರಪ್ರದೇಶದ ಸರ್ಕಾರಿ ಇಲಾಖೆಗಳಲ್ಲಿ ಕಳೆದ ಕೆಲವೇ ದಿನಗಳಿಂದ ಹೊಸತನದ ಬದಲಾವಣೆ ಕಾಣುತ್ತಿದೆ.
ಅಧಿಕಾರಿಗಳು ನಿಧಾನಕ್ಕೆ ತಡವಾಗಿ ಬರುವ, ಕಾರ್ಯದಲ್ಲಿ ವಿಳಂಬ ಧೋರಣೆ ಅನುಸರಿಸುವ ತಮ್ಮ ಹಳೆಯ ‘ನವಾಬಿ’ ಸಂಸ್ಕೃತಿಯನ್ನು ತೊರೆಯುತ್ತಿದ್ದಾರೆ. ಗುಟ್ಕಾ, ಪಾನ್ ಮಸಾಲಗಳ ಬದಲು ಚ್ಯುಯಿಂಗ್ ಗಮ್, ಇನ್ನಿತರ ತಿನಿಸುಗಳನ್ನು ಜಗಿಯಲು ಆರಂಭಿಸಿದ್ದಾರೆ.
ಸಮಯಕ್ಕೆ ಸರಿಯಾಗಿಯೇ ಎಲ್ಲಾ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಬೆಳಿಗ್ಗೆ 9.30ಕ್ಕೆಯೇ ಎಲ್ಲಾ ಸರ್ಕಾರಿ ಇಲಾಖೆಗಳ ಪಾರ್ಕಿಂಗ್ಗಳಲ್ಲಿ ವಾಹನಗಳಿಂದ ಫುಲ್ ಆಗಿರುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ..
ಗುಟ್ಕಾ ಪಾನ್ ಮಸಾಲಗಳ ರ್ಯಾಪರ್ಗಳಿಂದ ತುಂಬಿದ್ದ ಇಲಾಖೆಗಳ ಆವರಣ ಇದೀಗ ಸ್ವಚ್ಛವಾಗಿದೆ. ಕಸಗಳನ್ನು ಕಸದಬುಟ್ಟಿಯಲ್ಲಿಯೇ ಹಾಕುವ ಸಂಪ್ರದಾಯವನ್ನು ಅಧಿಕಾರಿಗಳು ಕಲಿತುಕೊಂಡಿದ್ದಾರೆ.
ಅರಣ್ಯ ಇಲಾಖೆಯ ಮುಂಭಾಗದಲ್ಲಿ ’ಕ್ಯಾಮರಾ ಕಣ್ಗಾವಲಿದೆ, ಗುಟ್ಕಾ ಸೇವನೆ ಕಂಡುಬಂದರೆ ೧ ಸಾವಿರ ದಂಡ ವಿಧಿಸಲಾಗುವುದು’ ಎಂಬ ಬೋರ್ಡನ್ನೂ ಹಾಕಲಾಗಿದೆ.
ದಿನದಲ್ಲಿ 18-20 ಗಂಟೆ ದುಡಿಯಲು ಸಿಎಂ ಯೋಗಿ ಆದಿತ್ಯನಾಥರು ಅಧಿಕಾರಿಗಳಿಗೆ ಆದೇಶಿಸಿದ್ದರು, ಅಂದರಂತೆ ಇದೀಗ ಹಾಜರಾತಿಯ ಪೂರ್ಣ ಪ್ರಮಾಣದಲ್ಲಿದೆ.
ನಡುನಡುವೆ ಎದ್ದು ಕಾಫಿಗೆ ಹೋಗುವ, ಸಾರ್ವಜನಿಕರಿಗೆ ನಾಳೆ ಬನ್ನಿ, ಸರ್ ಊಟಕ್ಕೆ ಹೋಗಿದ್ದಾರೆ ಮತ್ತೆ ಬನ್ನಿ ಎಂದು ಹೇಳುವ ಪ್ರವೃತ್ತಿಯನ್ನೂ ಅಧಿಕಾರಿಗಳು ಕಡಿಮೆ ಮಾಡಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಯೋಗಿ ಸರ್ಕಾರ ಸರ್ಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ ತರಲು ಚಿಂತನೆ ನಡೆಸಿದೆ.
ಒಟ್ಟಿನಲ್ಲಿ ಯೋಗಿ ಬಂದ ಬಳಿಕ ಸರ್ಕಾರಿ ಸಿಬ್ಬಂದಿಗಳ, ಕಛೇರಿಗಳ ಚಿತ್ರಣವೇ ಬದಲಾಗಿರುವುದು ಎದ್ದು ಕಾಣುತ್ತದೆ. ನಿಧಾನಕ್ಕೆ ಸರ್ಕಾರಿ ಸಿಬ್ಬಂದಿಗಳು ’ನವಾಬಿ’ ಸಂಸ್ಕೃತಿಯನ್ನು ತೊರೆದು ಜನರ ಸೇವೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದನ್ನು ಕಲಿತುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.