ನವದೆಹಲಿ: ಲೋಕಸಭೆಯಲ್ಲಿ ಜಿಎಸ್ಟಿ ಮಸೂದೆ ಅನುಮೋದನೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿಸ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ದೇಶದ ಸಮಸ್ತ ಜನತೆಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಸೂದೆ ಅನುಮೋದನೆಗೊಂಡ ತಕ್ಷಣ ಹಿಂದಿಯಲ್ಲಿ ಟ್ವಿಟ್ ಮಾಡಿದ ಅವರು, ’ಜಿಎಸ್ಟಿ ಮಸೂದೆ ಮಂಡನೆಗೊಂಡಿರುವುದಕ್ಕೆ ದೇಶದ ಜನತೆಗೆ ಅಭಿನಂದನೆಗಳು. ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ’ ಎಂದಿದ್ದಾರೆ.
GST बिल पास होने पर सभी देशवासियों को बधाई | नया साल, नया कानून, नया भारत!
— Narendra Modi (@narendramodi) March 29, 2017
ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ದೇಶದೆಲ್ಲೆಡೆ ಏಕರೂಪ ತೆರಿಗೆಯನ್ನು ಅನುಷ್ಠಾನಗೊಳಿಸುವ ಮಹತ್ವದ ಜಿಎಸ್ಟಿ ಮಸೂದೆಗೆ ಬುಧವಾರ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
8 ಗಂಟೆಗಳ ಕಾಲ ಸುಧೀರ್ಘವಾಗಿ ನಡೆದ ಚರ್ಚೆಯ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ(ಸಿಜಿಎಸ್ಟಿ), ಏಕೀಕೃತ ಸರಕು ಮತ್ತು ಸೇವಾ ತೆರಿಗೆ, ಪರಿಹಾರ ಸರಕು ಮತ್ತು ಸೇವಾ ತೆರಿಗೆ, ಕೇಂದ್ರಾಡಳಿತ ಸರಕು ಮತ್ತು ಸೇವಾ ತೆರಿಗೆ ೨೦೧೭ಗೆ ಧ್ವನಿಮತದ ಮೂಲಕ ಅನುಮೋದನೆ ದೊರೆಯಿತು.
ತೆರಿಗೆಯಲ್ಲಿ ಸಾಂವಿಧಾನಿಕವಾಗಿ ವಿಶೇಷಾಧಿಕಾರ ಹೊಂದಿರುವ ಜಮ್ಮು ಕಾಶ್ಮೀರ ಈ ೪ ಜಿಎಸ್ಟಿ ಮಸೂದೆಗಳನ್ನು ತನ್ನ ವಿಧಾನಸಭೆಯಲ್ಲಿ ಮಂಡನೆಗೊಳಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.