ಬೆಂಗಳೂರು: ಬಜೆಟ್ನಲ್ಲಿ ಘೋಷಿಸಲಾದಂತೆ ತೆರೆಯಲಾಗುವ ಕ್ಯಾಂಟೀನ್ಗಳಿಗೆ ’ನಮ್ಮ ಕ್ಯಾಂಟೀನ್’ ಬದಲು ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿಯೇ ಹೇಳಿಕೆ ನೀಡಿರುವ ಅವರು, ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ಆರಂಭಿಸಲಿರುವ ಕ್ಯಾಂಟೀನ್ಗಳಿಗೆ ಇಂದಿರಾ ಗಾಂಧಿಯವರ ಹೆಸರಿಡುವಂತೆ ಕಾಂಗ್ರೆಸ್ನ ಅನೇಕ ಶಾಸಕರು ಹಾಗೂ ಮುಖಂಡರು ಆಗ್ರಹಿಸಿದ್ದರು ಎಂದಿದ್ದಾರೆ.
ಇಂದಿರಾ ಅವರ ಹೆಸರನ್ನು ಇಟ್ಟರೆ ಇದು ಕಾಂಗ್ರೆಸ್ ಪಕ್ಷದ ಯೋಜನೆ ಎಂದು ಸರಳವಾಗಿ ಗುರುತಿಸಬಹುದು ಎಂಬ ಆಲೋಚನೆಯೂ ಇದರ ಹಿಂದಿದೆ ಎನ್ನಲಾಗಿದೆ.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಇಂದಿರಾಗಾಂಧಿ, ಜವಾಹರಲಾಲ್, ರಾಜೀವ್ ಗಾಂಧಿ ಮುಂತಾದವರ ಹೆಸರಿನ ಯೋಜನೆಗಳು ಸಾಮಾನ್ಯವೇ ಆಗಿಬಿಟ್ಟಿದ್ದು, ಅವಕ್ಕೇ ಲೆಕ್ಕವೂ ಇಲ್ಲ. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಯಾಂಟೀನ್ ಯೋಜನೆಗೆ ಇಂದಿರಾ ಮೇಡಂ ಹೆಸರಿಡುವ ಮೂಲಕ ಮತ್ತದೇ ಪರಿಪಾಠಕ್ಕೆ ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.