ನವದೆಹಲಿ: ಈ ಬಾರಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಯಲಿರುವ ನಗರಗಳ ಪಟ್ಟಿಗೆ 23 ಹೊಸ ನಗರಗಳು ಸೇರ್ಪಡೆಗೊಂಡಿದ್ದು, ಕರ್ನಾಟಕದ 4 ಹೊಸ ನಗರಗಳು ಸೇರ್ಪಡೆಗೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನೀಟ್ ಪರೀಕ್ಷೆ ನಡೆಯುವ ನಗರಗಳ ಪಟ್ಟಿಯನ್ನು ಘೋಷಿಸಿದ್ದಾರೆ. 23 ಹೊಸ ನಗರಗಳನ್ನು ಈ ಪಟ್ಟಿಗೆ ಸೇರಿಸಲಾಗಿದ್ದು, ನೀಟ್ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆ 80ರಿಂದ 103ಕ್ಕೆ ಏರಿಕೆಯಾಗಿದೆ.
ಈ 23 ಹೊಸ ನಗರಗಳಲ್ಲಿ ಕರ್ನಾಟ ಮತ್ತು ಮಹಾರಾಷ್ಟ್ರದ 4, ಗುಜರಾತ್ ಮತ್ತು ತಮಿಳುನಾಡಿನ 3, ಆಂಧ್ರಪ್ರದೇಶ, ಪ.ಬಂಗಾಳ ಮತ್ತು ಕೇರಳದ 2 ಹಾಗೂ ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶದ ತಲಾ ಒಂದು ನಗರಗಳು ಸೇರಿವೆ. ಸರ್ಕಾರ ಇನ್ನಷ್ಟು ಕೇಂದ್ರಗಳನ್ನು ಸೇರಿಸುವ ಸಾಧ್ಯತೆ ಇದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಅಭಾವದ ಕಾರಣ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.