ನವದೆಹಲಿ : ಕಾಂಗ್ರೆಸ್ ಸಂಸದ ಅಭಿಜಿತ್ ಸೋಮವಾರ ಯಾವುದೋ ಮಸೂದೆ ಬದಲು ಇನ್ನಾವದೋ ಮಸೂದೆಯ ಬಗ್ಗೆ ಕೆಳಮನೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಇರುಸು ಮುರಿಸಿಗೆ ಕಾರಣರಾದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಷೇಕ್ ಇಂದು ಭೂಸ್ವಾಧೀನ ವಿಧೇಯಕದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ ಅವರು ಆರ್ಥಿಕ ಮಸೂದೆ ಬಗ್ಗೆ ಮಾತನಾಡಿದರು. ಹೀಗಾಗೀ ಮಧ್ಯಪ್ರವೇಶಿಸಿದ ಸ್ಪೀಕರ್ ಈ ಮಸೂದೆಗೆ ಸದನದಲ್ಲಿ ಈಗಾಗಲೇ ಒಪ್ಪಿಗೆ ದೊರೆತಿದೆ ತಾವು ತಪ್ಪಾದ ಮಸೂದೆಯ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಅಭಿಜಿತ್ ಅವರ ಗಮನಕ್ಕೆ ತಂದರು. ಇದಾದ ಬಳಿಕ ಅಭಿಜಿತ್ ಅವರು ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದರು.
ಪಕ್ಷದ ಹಿರಿಯ ನಾಯಕರು ಮತ್ತು ಸಂಸದರು ಅಭಿಜಿತ್ ಅವರ ಈ ನಡೆಯಿಂದ ಕಸಿವಿಸಿಗೊಳಗಾದರು.
ಅದೇನೆ ಇರಲಿ ಹಿಂದೆ ರಾಹುಲ್ ಇಂದು ಅಭಿಜಿತ್ರವರ ಇಂತಹ ನಡವಳಿಕೆಯಿಂದ ಕಾಂಗ್ರೆಸ್ ತನ್ನ ಯುವ ಸಂಸದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದಂತು ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.