ಇಟಾನಗರ್: ದೃಷ್ಟಿಹೀನ ಜನರು ವಸ್ತುಗಳನ್ನು ಸುಲಭವಾಗಿ ಗುರುತಿಸಲು ಸಹಾಯಕವಾಗುವ ‘ಗಾಗಲ್ ಫಾರ್ ಬ್ಲೈಂಡ್’ (G4B) ಎಂಬ ಹೊಸ ಸಾಧನವನ್ನು ಗಲ್ಯಾಕ್ಸಿ ಅಕಾಡೆಮಿಯ ೧೧ ತರಗತಿ ವಿದ್ಯಾರ್ಥಿ ಆನಂಗ್ ತಾದರ್ ಆವಿಷ್ಕಾರ ಮಾಡಿದ್ದಾನೆ.
ಗಾಗಲ್ ಫಾರ್ ಬ್ಲೈಂಡ್ ಸಾಧನ ‘ಇಖೋಲೊಕೇಶನ್’ (echolocation) ತತ್ವದ ಮೂಲಕ ಅಂಧರು ಯಾವುದೇ ದೈಹಿಕ ಸಂಪರ್ಕ ಇಲ್ಲದೇ ಸುತ್ತಮುತ್ತಲಿನ ವಸ್ತುಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.
ಖೋಲೊಕೇಶನ್ ಧ್ವನಿ ತರಂಗಗಳು ಮತ್ತು ಪ್ರತಿಧ್ವನಿಗಳ ಮೂಲಕ ಜಾಗದಲ್ಲಿ ವಸ್ತುಗಳನ್ನು ಗುರುತಿಸುವುದಾಗಿದೆ. ಬಾವಲಿಗಳು ರಾತ್ರಿ ವೇಳೆ ಇಖೋಲೊಕೇಶನ್ ಮೂಲಕ ಆಹಾರವನ್ನು ಹುಡುಕುತ್ತವೆ.
ಗುವಾಹಟಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದದ ಪ್ರಾದೇಶಿಕ ಮಟ್ಟದ ವಿಜ್ಞಾನ ಉತ್ಸವದಲ್ಲಿ ಆತನ ಈ ಸಂಶೋಧನೆಗಾಗಿ ದೀನನಾಥ್ ಪಾಂಡೆ ಸ್ಮಾರ್ಟ್ ಐಡಿಯಾ ಇನ್ನೋವೇಶನ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮಾರ್ಚ್ 6ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಪ್ರದರ್ಶನದಲ್ಲಿ ಆನಂಗ್ ತಾದರ್ ಭಾಗವಹಿಸಿದ್ದು, ನ್ಯಾಶನಲ್ ಇಗ್ನಿಷನ್ ಫೆಸಿಲಿಟಿ (ಎನ್ಐಎಫ್) ಸಹಯೋಗದ ಹನಿ ಬೀ ನೆಟ್ವರ್ಕ್, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಮೆಚ್ಚುಗೆ ವ್ಯಕ್ತಪಡಿಸಿವೆ.
ಎನ್ಐಎಫ್ ಹಾಗೂ ಯೂನಿಸೆಫ್ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಶನಂಗ್ ತಾದರ್ನಲ್ಲಿ ಇನ್ನಷ್ಟು ಮಾದರಿಗಳನ್ನು ತಯಾರಿಸುವಂತೆ ಕೇಳಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.