ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಕೇಂದ್ರ ಸರ್ಕಾರದ ಇ-ಮಾರುಕಟ್ಟೆ ಖರೀದಿ ಮತ್ತು ಸಂಗ್ರಹಣೆ ಆರಂಭಿಸಿದ್ದು, ಇದನ್ನು ಆರಂಭಿಸಿದ ಮೊದಲ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಎನಿಸಿಕೊಂಡಿದೆ.
ಎಸ್ಎಸ್ಬಿ ಹೊಸದಾಗಿ ರಚಿಸಲಾಗಿರುವ ಇ-ಮಾರುಕಟ್ಟೆಯಿಂದ 23 ವಾಹನಗಳನ್ನು ಪಡೆದಿದ್ದು, ಮುಖ್ಯ ನಿರ್ದೇಶಕಿ ಅರ್ಚನಾ ರಾಮಸುಂದರಂ ಸಂತಸ ವ್ಯಕ್ತಪಡಿಸಿದ್ದಾರೆ. ಇ-ಸಂಗ್ರಹಣೆಯಿಂದ ಖರೀದಿಯಲ್ಲಿ ಪಾರದರ್ಶಕತೆ ಸುಧಾರಿಸಲಿದೆ ಎಂದು ಎಂದು ಅವರು ಹೇಳಿದ್ದಾರೆ.
ಎಸ್ಎಸ್ಬಿ ಸರ್ಕಾರದ ಇ-ಮಾರುಕಟ್ಟೆಗಳು ಮತ್ತು ಸ್ಟೋರ್ಗಳಿಂದ ವಾಹನಗಳ ಖರೀದಿ ಮತ್ತು ಸಂಗ್ರಹಣೆ ನಡೆಸುವಂತೆ ಕ್ಷೇತ್ರ ಘಟಕಗಳಿಗೆ ನಿರ್ದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.