ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು 12ನೇ ಬಜೆಟ್ ಮಂಡಿಸಲಿದ್ದು, ತಮ್ಮ ರಾಜಕೀಯ ಜೀವನದಲ್ಲಿ ಸದ್ಯಕ್ಕಂತೂ ಬರೋಬ್ಬರಿ 1 ಡಜನ್ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರವಾಗಲಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಿಸಿ ಇನ್ನೂ ಇದ್ದು, ಬಿಜೆಪಿ ಸಂಭ್ರಮದಲ್ಲಿದೆ. ಮೋದಿ ಅಲೆ ಎಲ್ಲೆಡೆ ಮೋಡಿ ಮಾಡಿದೆ. ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆ ಸನಿಹವಾಗುತ್ತಿದ್ದು, ಸಿದ್ದರಾಮಯ್ಯನವರು ಮಂಡಿಸಲಿರುವ ಈ ಬಜೆಟ್ ಕುತೂಹಲದಿಂದ ಕೂಡಿದೆ.
ಬಜೆಟ್ ಎಂಬುದು ಪರೋಕ್ಷವಾಗಿ ಚುನಾವಣಾ ಪ್ರಣಾಳಿಕೆ ಎಂಬಂತೆಯೇ ಪ್ರತಿಬಿಂಬಿತವಾಗುವುದು ಸಹಜ. ಅದಕ್ಕೆ ಪೂರಕವಾಗಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಮೂಲಕ, ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುವುದು ನಿರೀಕ್ಷಿತ.
ಬಿಜೆಪಿ ಗೆದ್ದರೆ ರೈತರ ಸಾಲ ಮನ್ನಾ ಮಾಡುವುದಾಗಿ ಉತ್ತರ ಪ್ರದೇಶದಲ್ಲಿ ಮೋದಿ ಅವರು ಘೋಷಿಸಿದ್ದಾರೆ. ಅದೇ ಹಾದಿಯನ್ನು ಸಿದ್ದರಾಮಯ್ಯನವರು ಅನುಸರಿಸುವ ನಿರೀಕ್ಷೆ ಇದೆ.
ಅತಿ ಕಡಿಮೆ ದರದಲ್ಲಿ ಊಟೋಪಹಾರ ಒದಗಿಸುವಿಕೆ, ಇದಕ್ಕೆ ಸಂಬಂಧಿಸಿದಂತೆ ಅಕ್ಷಯ ಪಾತ್ರ ಸಂಸ್ಥೆಯೊಂದಿಗೆ ಟೈಯಪ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಪ.ಜಾತಿ, ಪಂಗಡದವರಿಗೆ ಉಚಿತ ವಿದ್ಯುತ್, ನಗರ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಇತ್ಯಾದಿ ಜನಪ್ರಿಯ ಯೋಜನೆ ಮಂಡಿಸುವ ಸಾಧ್ಯತೆ ಇದೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.