ನವದೆಹಲಿ: ಪೋಕ್ರಾನ್ನಲ್ಲಿ ಮೇ 11, 1998ರಂದು ನಡೆಸಿದ ಅಣ್ವಸ್ತ್ರ ಪರೀಕ್ಷೆಯನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ತಂತ್ರಜ್ಞಾನಕ್ಕೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.
ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘1998ರ ಪೋಕ್ರಾನ್ ಟೆಸ್ಟ್ನ ಯಶಸ್ಸಿನ ಹಿಂದಿರುವ ವಿಜ್ಞಾನಿಗಳಿಗೆ, ರಾಜಕೀಯ ಮುಖಂಡರುಗಳಿಗೆ ನಮ್ಮ ಸೆಲ್ಯೂಟ್’ ಎಂದಿದ್ದಾರೆ.
ಈ ಸಾಧನೆಗೆ ಕಾರಣೀಕರ್ತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶ್ಲಾಘಿಸಿದ ಅವರು, ಈ ವೇಳೆ ಅಟಲ್ಜೀ ಸರ್ಕಾರ ಮಹಾನ್ ಸಾಹಸವನ್ನು ಮತ್ತು ಬಲಿಷ್ಠ ನಾಯಕತ್ವದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದೆ ಎಂದರು.
ಅಲ್ಲದೇ ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ದೇಶದ ಜನರಿಗೆ ಶುಭ ಕೋರಿದರು. ಇದು ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರು, ಜನರ ಜೀವನವನ್ನು ಬದಲಿಸುವ ಶಕ್ತಿ ತಂತ್ರಜ್ಞಾನಕ್ಕೆ ಇದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.