ಖರಗ್ಪುರ: ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಒಂದು ತಂಡ ಸೇನೆ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಾನವರಹಿತ ವೈಮಾನಿಕ ಡ್ರೋನ್ನ್ನು ಅಭಿವೃದ್ಧಿಪಡಿಸಿದೆ.
ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ವಿದ್ಯಾರ್ಥಿಗಳ ತಂಡ ಪ್ರೊ. ಸುದೀಪ್ ಮಿಶ್ರಾ ನೇತೃತ್ವದಲ್ಲಿ ಇನ್ಸ್ಟಿಟ್ಯೂಟ್ನ ಸ್ಮಾರ್ಟ್ ವೈರ್ಲೆಸ್ ಅಪ್ಲಿಕೇಶನ್ ಹಾಗೂ ನೆಟ್ವರ್ಕಿಂಗ್ ಪ್ರಯೋಗಾಲಯದಲ್ಲಿ ವೈಮಾನಿಕ ಕಣ್ಗಾವಲು, ತುರ್ತು ಅಗತ್ಯ ವಸ್ತುಗಳ ಸರಬರಾಜು ಹಾಗೂ ವಿಪತ್ತು ರಕ್ಷಣಾ ಕಾರ್ಯಾಚರಣೆ ವೈಶಿಷ್ಟ್ಯಗಳ ‘ಭೀಮ್’ ಡ್ರೋನ್ನ್ನು ಅಭಿವೃದ್ಧಿಪಡಿಸಿದೆ.
ಈ ವೈಶಿಷ್ಟ್ಯಗಳನ್ನು ಹೊರತುಪಡಿಸಿ ಡ್ರೋನ್ಗಳ ವೆಚ್ಚವನ್ನು ಮಾರುಕಟ್ಟೆ ವೆಚ್ಚಕ್ಕಿಂತ ಶೇ.30ರಷ್ಟು ಕಡಿಮೆ ಮಾಡಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಕಣ್ಗಾವಲು ಪ್ರದೇಶದಲ್ಲಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ, ಸುದೀರ್ಘ ಕಾರ್ಯಾಚರಣೆ, ತುರ್ತು ಸರಬರಾಜು ನಿರ್ವಹಿಸಲು ಪ್ಯಾರಾಶೂಟ್ ಬಳಕೆಗೆ ಸಹಾಯಕವಾಗಲಿದೆ. ಇದನ್ನು ದೂರದ ನಿರ್ಜನ ಪ್ರದೇಶಗಳಿಗೂ ಬಳಸಬಹುದು. ಸಂಪರ್ಕ ಮೂಲಸೌಕರ್ಯ ಇಲ್ಲದ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಿಸಲು ಈ ಡ್ರೋನ್ ಬಳಸಬಹುದು ಎಂದು ಪ್ರೊ. ಸುದೀಪ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.