ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2017ರ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬೆಂಗಳೂರು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಸ್ಥಾನ ಪಡೆದಿವೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬೆಂಗಳೂರು 152ನೇ ಸ್ಥಾನ ಪಡೆದರೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ 185ನೇ ಸ್ಥಾನ ಪಡೆದಿದೆ. ಮೆಸ್ಯಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಂಐಟಿ), ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ, ಹಾರ್ವಾರ್ಡ್ ವಿಶ್ವವಿದ್ಯಾಲಯ, ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಹಾಗೂ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ವಿಶ್ವವಿದ್ಯಾಲಯ (ಕಾಲ್ಟೆಕ್) ಮೊದಲ 5 ಸ್ಥಾನಗಳನ್ನು ಪಡೆದಿವೆ.
ಐಐಎಸ್ಸಿ ಬೆಂಗಳೂರು ಹಾಗೂ ಐಐಟಿ ದೆಹಲಿ ಅಲ್ಲದೇ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ಐಐಟಿ ಖರಗ್ಪುರ, ಐಐಟಿ ರೂರ್ಕಿ ಹಾಗೂ ಐಐಟಿ ಗುವಾಹಟಿ ಟಾಪ್ 500ರಲ್ಲಿ ಸ್ಥಾನ ಪಡೆದಿವೆ.
ಕ್ಯೂಎಸ್ ಜಾಗತಿಕ ರ್ಯಾಂಕಿಂಗ್ ವಿಷಯಗಳ ಆಧಾರದಲ್ಲಿ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ನೀಡುತ್ತಿದ್ದು, 2017ರ 46 ವಿಷಯಗಳ ಪ್ರತ್ಯೇಕ ವಿಷಯಗಳ ಗಣನೆಗೆ ತೆಗೆದುಕೊಂಡಿದೆ.
ಇದು ವಿದ್ಯಾರ್ಥಿಗಳು ತಮ್ಮ ನಿರೀಕ್ಷಿತ ವಿಷಯಗಳನ್ನು ಹೋಲಿಕೆ ಮಾಡಿ ವಿಷಯಗಳ ವಿಸ್ತರಣೆ ಆಧಾರದಲ್ಲಿ ಆಯ್ದ ಮುಂಚೂಣಿ ಕಾಲೇಜುಗಳನ್ನು ಗುರುತಿಸಲು ಸಹಾಯ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.