ನವದೆಹಲಿ: ದೆಹಲಿಯ ಲೋಧಿ ಗಾರ್ಡನ್ಗೆ ಭೇಟಿ ಕೊಡುವವರಿಗೆ ಅಲ್ಲಿನ ಮುನ್ಸಿಪಲ್ ಕೌನ್ಸಿಲ್ ಸಿಹಿ ಸುದ್ದಿ ನೀಡಿದ್ದು, ಉಚಿತ ವೈ-ಫೈ ನೀಡಲು ಮುಂದಾಗಿದೆ.
‘ಎಪ್ರಿಲ್ ತಿಂಗಳಿನಿಂದ ಉಚಿತ ವೈ-ಫೈ ಸೌಲಭ್ಯ ಜಾರಿಗೆ ಬರಲಿದ್ದು, ಲೋಧಿ ಗಾರ್ಡನ್ನ್ನು ವೈಫೈ ಝೋನ್ ಮಾಡುವ ಕಾರ್ಯ ಭರದಿಂದ ಸಾಗಿದೆ. ಪಾರ್ಕ್ಗಳನ್ನು ವೈಫೈನಂತಹ ಸೌಲಭ್ಯಗಳ ಮೂಲಕ ಕನೆಕ್ಟ್ ಮಾಡುವುದು ಅತೀ ಮುಖ್ಯ’ ಎಂದು ದೆಹಲಿ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಯಲ್ಲಿರುವ ಇತರ ಪಾಕ್ಗಳಿಗೂ ಈ ಸೌಲಭ್ಯ ಶೀಘ್ರದಲ್ಲೇ ಬರಲಿದೆ ಎನ್ನಲಾಗಿದೆ.
ಲೋಧಿ ಗಾರ್ಡನ್ನ ’ಸ್ಮಾರ್ಟ್ ಪೋಲ್ಸ್’ ಮೂಲಕ ಉಚಿತ ವೈಫೈ ಇಂಟರ್ನೆಟ್ ಸೇವೆ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.